ಇಂದು ವೆನಿಜುಯೆಲಾ, ನಾಳೆ ಇರಾನ್… ನಂತರ..?
ವೆನೆಜುವೆಲಾ ಮೇಲೆ ಅಮೇರಿಕಾದ ದಾಳಿಯ ವಿರುದ್ದ ಖ್ಯಾತ ಅಂಕಣಕಾರ ಶಿವಸುಂದರ್ ಅವರ ಅಂಕಣ.

ಸಾಮಂತರಾಗಿ ಅಥವಾ ಸರ್ವನಾಶವಾಗಿ.. ಜಗತ್ತಿನ ಮೇಲೆ ನವ ಹಿಟ್ಲರ್ ಟ್ರಂಪಿನ ಯುದ್ಧಘೋಷಣೆ?
ಜಗದ ಮೇಲೆ ಅಮೇರಿಕಾದ ಯುದ್ಧವನ್ನು ಸ್ವಾಭಿಮಾನಿ ಜನರು ಹಾಗೂ ಸಾರ್ವಭೌಮಿ ದೇಶಗಳೆಲ್ಲರೂ ವಿರೋಧಿಸೋಣ..

ಸಾಮ್ರಾಜ್ಯಶಾಹಿ ಡ್ರಗ್ ಅಡಿಕ್ಟ್ ವೆನಿಜುಯೆಲಾ ಮೇಲೆ ದಾಳಿ ಮಾಡಿರುವುದು ತೈಲಕ್ಕೆ. ಡ್ರಗ್ಸ್ ನಿಯಂತ್ರಣಕ್ಕಲ್ಲ. ಅಫ್ಗನಿಸ್ತಾನವನ್ನು ಆಕ್ರಮಿಸಿದ ನಂತರ 2001-2021 ರ ತನಕ ಅಲ್ಲಿ ಬೃಹತ್ ಡ್ರಗ್ ಕಾರ್ಟೆಲ್ ಗಳನ್ನು ನಡೆಸಿದ್ದೆ ಅಮೇರಿಕ. ಅದರ ಆರ್ಥಿಕ ಫಲಾನುಭವಿಗಳಲ್ಲಿ ಅಮೇರಿಕಾದ ಉನ್ನತ ಸೇನಾಧಿಕಾರಿಗಳು, ಡೆಮೋಕ್ರೇಟ್ಸ್ ಗಳು ಮತ್ತು ರಿಪಬ್ಲಿಕನ್ನರು, ಉದ್ಯಮಿಗಳು ಇದ್ದಾರೆ…

ತಾನು ಯುದ್ಧ ನಿಲ್ಲಿಸುವ ಶಾಂತಿ ದೂತ ಎಂಬ ಟ್ರಂಪಿನ ಹೇಳಿಕೆ ಎಷ್ಟು ಹಾಸ್ಯಸ್ಪದವೋ, ವೆನಿಜುಯೆಲಾ ದಲ್ಲಿ ಪ್ರಜಾತಂತ್ರ ಸ್ಥಾಪಿಸಲು ಆ ದೇಶದ ಅಧ್ಯಕ್ಷರನ್ನು ಬಂಧಿಸಲಾಯಿತು ಎಂಬ ಹೇಳಿಕೆಯೂ ಅದಕ್ಕಿಂತ ಹೆಚ್ಚು ಹಾಸ್ಯಸ್ಪದ…ಇದನ್ನು ಸ್ವಸ್ತ ಮನಸ್ಸಿನ ಅಮೇರಿಕರನ್ನರೆ ನಂಬುವುದಿಲ್ಲ..
1950 ರಿಂದಲೂ ಅಮೇರಿಕ ದಕ್ಷಿಣ ಅಮೇರಿಕಾದ ಎಲ್ಲಾ ದೇಶಗಳನ್ನು ತನ್ನ ಪರೋಕ್ಷ ವಸಾಹಾತು ವಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಅದಕ್ಕೆ ಅಡ್ಡಿಯಾಗಿರುವ ಆಳ್ವಿಕೆಗಳ ವಿರುದ್ಧ CIA ಮೂಲಕ ದಂಗೆಗಳನ್ನು ಪ್ರಚೋದಿಸುವುದು, ತನ್ನ ವಿರೋಧಿ ಅಧ್ಯಕ್ಷರ ಹತ್ಯೆ ಮಾಡುವುದು, ಆ ಜಾಗದಲ್ಲಿ ತನ್ನ ಚೇಲ ಗಳನ್ನು ನೇಮಕಗೊಳ್ಳುವಂತೆ ಮಾಡುವುದು, ಅದು ಅನುಸರಿಸುತ್ತ ಬಂದಿರುವ ಸಾಮ್ರಾಜ್ಯಶಾಹಿ ಕುತಂತ್ರಗಳು.
ಅಮೇರಿಕಾದ ಈ ಸಾಮ್ರಾಜ್ಯಶಾಹಿ ಆಕ್ರಮಣಗಳಲ್ಲಿ ವಿಶ್ವಸಂಸ್ಥೆ ಒಂದೋ ಸಹಭಾಗಿ ಅಥವಾ ಮೂಕ ಪ್ರೇಕ್ಷಕ…
ಅಮೇರಿಕಾದ ಈ ಸಾಮ್ರಾಜ್ಯ ಶಾಹಿ ಆಕ್ರಮಣಗಳಿಗೆ ದೊಡ್ಡ ಇತಿಹಾಸವೇ ಇದೆ..
ಹಾಗೇ ನೋಡಿದರೆ ಯುರೋಪಿನ ಬಿಳಿಯರು ಎರಡು ಕೋಟಿ ಅಮೇರಿಕಾದ ಮೂಲ ನಿವಾಸಿಗಳನ್ನು ನರಮೇಧ ನಡೆಸಿ ಅವರ ಗೊರಿಗಳ ಮೇಲೆ ಬಿಳಿ ಅಮೇರಿಕನ್ ಚಕ್ರಧಿಪತ್ಯಾ ಕಟ್ಟಿದರು. ನಂತರ ಕೋಟಿ ಕೋಟಿ ಆಫ್ರಿಕನ್ ಕಪ್ಪು ಜನರನ್ನು ಗುಲಾಮರಾನ್ನಾಗಿಸಿಕೊಂಡು ಅವರ ಶ್ರಮದ ಮೇಲೆ ತಮ್ಮ ಸಾಮ್ರಾಜ್ಯ ವಿಸ್ತರಣೆ ಪ್ರಾರಂಭಿಸಿದರು. ಅವರ ಮೊದಲ ಗುರಿ ಉತ್ತರದ ಕೆನಡಾ ಮತ್ತು ದಕ್ಷಿಣ ಅಮೇರಿಕಾಗಲೇ ಆಗಿತ್ತು.

ಎರಡುಮಹಾಯುದ್ಧಗಳಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನಂತ ಇತರ ಸಾಮ್ರಾಜ್ಯಶಾಗಳು ಬಳಹೀನವಾದ ಅವಕಾಶ ಬಳಸಿಕೊಂಡು ಇಡೀ ಪಶ್ಚಿಮ ಗೋಳದಲ್ಲಿ ಅಮೇರಿಕಾದ ಅಧಿಪತ್ಯವೇ ಮುಂದುವರೆಯ ಬೇಕೆಂಬ ಮುನ್ರೋ ಸಿದ್ಧಾಂತವನ್ನು ಪ್ರಬಲವಾಗಿ ಜಾರಿ ಮಾಡಲು ಪ್ರಾರಂಭಿಸಿತು..
1952 ರಲ್ಲಿ ಗ್ವಟೆಮಾಲಾದ ಸಮಾಜವಾದಿ ಅಧ್ಯಕ್ಷರನ್ನು, 1953 ರಲ್ಲಿ ಇರಾನಿನ ರಾಷ್ಟ್ರೀಯವಾದಿ ಅಧ್ಯಕ್ಷ ಮುಸದೆಕ್, 1971 ರಲ್ಲಿ ಚಿಲಿಯ ಸಮಾಜವಾದಿ ಅಧ್ಯಕ್ಷ ಅಲೆಂದೆಯನ್ನು , 1968 ರಲ್ಲಿ ಕಾಂಗೋದ ಲೂಮುಂಬ, 1984 ರಲ್ಲಿ ಬುರ್ಕಿನೋ ಫಾಸೋದ ಪ್ರಖ್ಯಾತ ಅಧ್ಯಕ್ಷ ತಾಮಸ್ ಸಂಕರ ಹಾಗೂ ಇನ್ನಿತರರನ್ನು ಅಮೇರಿಕಾದ CIA ಕೊಂದು ಹಾಕಿತು. ಇದಲ್ಲದೆ 1958 ರಿಂದ ಕ್ಯೂಬಾದ ಕಮ್ಯುನಿಸ್ಟ್ ನಾಯಕ ಕ್ಯಾಸ್ಟ್ರೋ ಮೇಲೆ ಮತ್ತು ರಾಷ್ಟ್ರೀಯವಾದಿ, ಸಮಾಜವಾದಿ ಅರಬ್, ಆಫ್ರಿಕನ್ ಮತ್ತು ಎಶಿಯನ್ ನಾಯಕರ ಮೇಲೆ ಸತತ ಹತ್ಯಾ ಪ್ರಯತ್ನಗಳನ್ನು ನಡೆಸಿತು.
1982 ರಲ್ಲಿ ಗ್ರೇನೆಡಾ ಡಾ ಅಧ್ಯಕ್ಷರನ್ನು ಡ್ರಗ್ಸ್ ಹೆಸರಲ್ಲಿ ಬಂಧಿಸಿತು. 1990-2003 ರಲ್ಲಿ , ತನ್ನ ವಿಸ್ತರಣೆಗೆ ಸಹಾಯ ಮಾಡದ ಇರಾಕ್ ಮೇಲೆ 2011 ರಲ್ಲಿ ಲಿಬ್ಯಾ ಗಳ ಮೇಲೆ ದಾಳಿ ಮಾಡಿ ಆ ದೇಶವನ್ನು ಚಿಂದಿ ಚಿಂದಿ ಮಾಡಿತು. ಇಂಡೋನಿಶಿಯದಲ್ಲಿ ಸರ್ವಧಿಕಾರಿ ಸುಹಾರತೋ ಗೆ ಬೆಂಬಲಿಸುತ್ತ ಲಕ್ಷಾಂತರ ಕಮ್ಯುನಿಷ್ಟರ ಕಗ್ಗೊಲೆ ಮಾಡಿಸಿತು. ಇನ್ನು ಆಫ್ರಿಕಾದಲ್ಲತೂ ನಿರಂತರ ಹಿಂಸಾತ್ಮಕ ಆರಾಜಾಕತೆ ಪೋಶಿಸುತ್ತಾ ತನ್ನ ಆರ್ಥಿಕ ಬೇಳೆ ಬೇಯಿಸಿಕೊಳ್ಳುತ್ತಲೆ ಇದೆ.
ಇತ್ತೀಚಿನ ದಶಕಗಳಲ್ಲಿ ಅಮೇರಿಕ ಅಧಿಪತ್ಯದ ವಿರುದ್ಧ ಚೀನ ಮತ್ತು ರಷ್ಯಾ ಪರ್ಯಾಯ ಶಕ್ತಿ ಕೇಂದ್ರವಾಗುತ್ತಿದೆ. ಅದರ ಜೊತೆಗೆ ಸಹಕರಿಸುತ್ತಿರುವ ದ. ಅಮೇರಿಕಾದ ವೆನಿಜುಯೆಲಾ, ಬ್ರೇಜಿಲ್, ಇರಾನ್ ಗಳಲ್ಲಿನ ರಾಜಕೀಯ ನಾಯಕತ್ವವನ್ನು ಕಿತ್ತೊಗೆಯುವುದು ಅಮೇರಿಕ ಅನುಸರಿಸುತ್ತಿರುವ ಸದ್ಯದ ನೀತಿ. ವೆನಿಜುಯೆಲಾ ದ ಬೆಳವಣಿಗೆಗಳ ಹಿಂದಿರುವ ಮತ್ತೊಂದು ಕಾರಣವದು.

ವೆನಿಜುಯೆಲಾದ ಅಮೇರಿಕ ಪೋಷಿತ ರಾಜಕೀಯ ನಾಯಕಿ ಮಾಚಡೋ ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿದ್ದು, ಅದನ್ನು ಆಕೆ ಟ್ರಂಪ್ ಗೆ ಸಮರ್ಪಸಿದ್ದು ಅಮೇರಿಕ ರಚಿಸಿರುವ ವೆನಿಜುಯೆಲಾ ಮರುವಸಾಹತಿಕಾರಣ ನಾಟಕದ ಭಾಗಗಳೇ..ಆಗಿತ್ತು… ವೆನಿಜುಯೆಲಾ ದಲ್ಲಿ ಹೊಸ ನಾಯಕರು ಅಧಿಕಾರ ರೂಪುಗೊಳ್ಳುವವರೆಗೆ ಆ ದೇಶದ ತೈಲ ಮತ್ತು ರಾಜಕೀಯದ ನಿರ್ವಹಣೆ ನಾವೇ ಮಾಡುತ್ತೇವೆ ಎಂದು ಟ್ರಂಪ್ ಘೋಷಿಸಿರುವ ದ್ವನ್ಯರ್ಥ ವೂ ಟ್ರಂಪ್ ಚೇಲಾಗಲೇ ಅಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದೇ ಆಗಿದೆ..
ಇಸ್ರೇಲ್ ಮಾಡುತ್ತಿರುವ ಪ್ಯಾಲೇಸ್ತಿನಿನ ಸರ್ವನಾಶಕ್ಕೆ ಮತ್ತು ಲೇಬನಾನ್, ಸಿರಿಯಾಗಳಲ್ಲಿ ಅಮೇರಿಕದಂತೆ ಇಸ್ರೇಲ್ ಕೂಡ ನಡೆಸುತ್ತಿರುವ ಕಾನೂನು ಬಾಹಿರ ಸೈನಿಕ ಕಾರ್ಯಚಾರಣೆಗಳಿಗೆ ಅಮೇರಿಕ ಪ್ರೋತ್ಸಾಹ, ಬೆಂಬಲ, ರಕ್ಷಣೆ ಕೊಡುತ್ತಿದೆಯಷ್ಟೇ. ಅದಕ್ಕೂ ಪ್ರಧಾನ ಕಾರಣ ಆ ಭೂ ಭಾಗದಲ್ಲಿ ಇರಾನಿನ ಪ್ರಭಾವ ತಗ್ಗಿಸಿ, ಇರಾನಿನ ಇಸ್ಲಾಮಿಕ್ ಗಣರಾಜ್ಯದ ಮೇಲೆ ಮುತ್ತಿಗೆ ಹಾಕುವುದು.
ಇಂದು ವೆನಿಜುಯೆಲಾ, ನಾಳೆ ಇರಾನ್. ನಾಳಿದ್ದು ಕ್ಯೂಬ…. ನಂತರ…
ಒಟ್ಟಿನಲ್ಲಿ ಜಗತ್ತಿನ 200 ದೇಶಗಳೂ ಅಮೇರಿಕಾದ ಸಾಮಂತ ರಾಷ್ಟ್ರಗಳಾಗಬೇಕು. ಅಥವಾ ಸರ್ವನಾಶವಾಗಬೇಕು. ಇದು ಟ್ರಂಪ್ ಅಮೇರಿಕಾದ ನವ ಸಾಮ್ರಾಜ್ಯಶಾಹಿ ನೀತಿ.
ಭಾರತದ ಮೋದಿ, ಪಾಕಿಸ್ತಾನದ ಮುನೀರ್ ಟ್ರಂಪ ಸಾಮ್ರಾಜ್ಯದ ಹೊಸ ನಿಷ್ಠಾವಂತ ಸಾಮಂತರಾಗಿದ್ದಾರೆ..

ಆದರೆ ಸಾಮಂತ ಗಣದಲ್ಲೂ ಗುಲಾಮತನ ಮಾಡುವ ಸಾಮಂತರನ್ನು ಮಾತ್ರ ಟ್ರಂಪ್ ಅಮೇರಿಕ ಸಹಿಸುತ್ತದೆ.
ಹೀಗಾಗಿ ಭಾರತ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತವಾಗಿ ಉಳಿಯಬೇಕೆಂದರೆ ನಿಜವಾದ ರಾಷ್ಟ್ರಭಕ್ತರೇಲ್ಲರೂ ಮೋದಿಯ ಅಮೇರಿಕನ್ ಗುಲಾಮಿತನವನ್ನು ತಿರಸ್ಕರಿಸಿ ವೆನಿಜುಯೆಲಾ ಜನತೆಯ ಸಾರ್ವಭೌಮತೆಯ ಜೊತೆಗೆ ನಿಲ್ಲಬೇಕಿದೆ. ಅಮೇರಿಕನ್ ಸಾಮ್ರಾಜ್ಯಶಾಹಿಯ ವಿರುದ್ಧ ಧ್ವನಿ ಎತ್ತಬೇಕಿದೆ. ವಿಶ್ವಸಂಸ್ಥೆಯ ಪಕ್ಷಪಾತವನ್ನು ವಿರೋಧಿಸಬೇಕಿದೆ. ಅಮೇರಿಕಾವನ್ನು ಮಣಿಸಲು ಮುಂದೊಡಗು ತೆಗೆದುಕೊಳ್ಳದ ಚೀನಾ ಮತ್ತು ರಷ್ಯಾಗಳ ರಾಷ್ಟ್ರೀಯ ಸ್ವಾರ್ಥ, ವಿಸ್ತರಣಾವಾದಿ ವ್ಯಹತಂತ್ರಗಳನ್ನು ಅವರ ಪರಿಣಾಮ ಶೂನ್ಯ ಪ್ರತಿರೋಧವನ್ನೂ ಪ್ರಶ್ನಿಸಬೇಕಿದೆ….
-ಶಿವಸುಂದರ್

