ಸುಳ್ಯ ಜಾತ್ರೆಯ ಪ್ರಯುಕ್ತ ಚೆನ್ನಕೇಶವ ದೇವಸ್ತಾನದ ಬಳಿಯ ರಸ್ತೆ ಸರಿಪಡಿಸಲು ಶಾಸಕರಿಂದ ಅಧಿಕಾರಿಗಳಿಗೆ ಸೂಚನೆ.
ಜನವರಿ 10 ರಂದು ನಡೆಯುವ ಸುಳ್ಯ ಜಾತ್ರೆಯ ಪ್ರಯುಕ್ತ ಚೆನ್ನಕೇಶವ ದೇವಸ್ತಾನದ ಬಳಿಯ ರಸ್ತೆ ಸರಿಪಡಿಸಲು ಶಾಸಕರಿಂದ ಅಧಿಕಾರಿಗಳಿಗೆ ಸೂಚನೆ.

ಜನವರಿ 10 ರಂದು ನಡೆಯುವ ಜಾತ್ರೆಗೂ ಮೊದಲು ಚೆನ್ನಕೇಶವ ದೇವಸ್ತಾನದ ಮತ್ತು ರಥಬೀಧಿಯ ಬಳಿಯ ರಸ್ತೆ ಅತೀ ಶೀಘ್ರದಲ್ಲೇ ಸರಿಪಡಿಸುವಂತೆ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸೆಂಬರ್ 29 ರಂದು ತಾಲೂಕು ಪಂಚಾಯತ್ ನಲ್ಲಿರೋ ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ ಸಭೆಯಲ್ಲಿ ಸುಳ್ಯದ ಜಾತ್ರೆಗೆ ಇನ್ನು ಕೆಲವೇ ದಿನಗಳು ಇವೆ ,ಚೆನ್ನಕೇಶವ ದೇವಸ್ತಾನದ ಬಳಿ ಅಗೆದು ಹಾಕಿರೋ ರಸ್ತೆಯನ್ನು ಸರಿಪಡಿಸುವವರು ಯಾರು ಎಂದು ಶಾಸಕರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಮುಖ್ಯ ಪೇಟೆಯ ರಸ್ತೆ ನಗರ ಪಂಚಾಯತ್ ಎದುರಿನ ರಸ್ತೆ ಹೀಗೆ ಅಗೆದು ಹಾಕಿದ ಎಲ್ಲಾ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕೆಂದರು ಇದಕ್ಕೆ ಉತ್ತರಿಸಿದ ಇಂಜಿನಿಯರ್ ಶೋಭಾರಾಣಿಯವರು ಕುಡಿಯುವ ನೀರಿನ ಪೈಪ್ ಅಳವಡಿಕೆಗಾಗಿ ನಾವು ಅಗೆದ ರಸ್ತೆಯನ್ನು ನಾವೇ ಜಾತ್ರೆಗೂ ಮೊದಲು ಸರಿಪಡಿಸುತ್ತೇವೆ ಬರವಸೆ ನೀಡಿದರು .
ಸಭೆಯಲ್ಲಿ ನಗರಪಂಚಾಯತ್ ಸಿ.ಇ.ಒ ಬಸವರಾಜ್ ಅಮೃತ್ 2 ಯೋಜನೆಯ ಎ.ಇ ಶ್ರೀಕಾಂತ್ ,ಮಾಜೀ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಸದಸ್ಯರುಗಳಾದ ಕಿಶೋರಿ ಶೇಟ್ ,ಬುಧ್ದನಾಯ್ಕ್ ,ನಾರಾಯಣ ಶಾಂತಿನಗರ ,ಸುಭೋದ್ ಶೆಟ್ಟಿ ಮೇನಾಲ, ಶೀಲಾ ಕುರುಂಜಿ ಮತ್ತಿತರರು ಉಪಸ್ಥಿತರಿದ್ದರು.

