ಸುಳ್ಯದ ಸಬ್ ರಿಜಿಸ್ಟ್ರಾರ್ ಕಛೇರಿ ಯಲ್ಲಿ ಜನರಿಗೆ – ನಿಲ್ಲಲೂ, ಕೂರಲೂ ಆಗದಂತಹಾ ಪರಿಸ್ಥಿತಿ!!
ಸುಳ್ಯದ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿನ ಅವ್ಯವಸ್ಯೆಯಿಂದ ಜನಸಾಮಾನ್ಯರಿಗೆ ನಿಲ್ಲಲೂ ಕೂರಲೂ ಸ್ಥಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸುಳ್ಯದ ಮಿನಿ ವಿದಾನಸೌಧ ಕಟ್ಟಡ ಉದ್ಘಾಟನೆಗೊಂಡೆ ಅಷ್ಟೇನು ಹೆಚ್ಚು ಸಮಯವೇ ಆಗಿಲ್ಲ. ಹೀಗಿರುವಾಗ ಅದೇ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಈ ಅವ್ಯವಸ್ಥೆ ಉಂಟಾಗಲು ಕಾರಣವೇನು ?!
ಕಛೇರಿಗೆ ಕೆಲಸಕ್ಕೆಂದು ಆಗಮಿಸುವ ಜನಸಾಮಾನ್ಯರಿಗೆ ಕುಳಿತುಕೊಳ್ಳಲು, ಓಡಾಡಲೂ , ನಿಲ್ಲಲೂ ಎಲ್ಲದಕ್ಕೂ ಅಂದಾಜು ಏಳು ಅಡಿ ಅಗಲದ ವೆರಾಂಡವೇ ಗತಿ ಇಡೀ ಸುಳ್ಯ ತಾಲೂಕಿನ ಜನತೆ ದಿನನಿತ್ಯ ಒಂದಲ್ಲಾ ಒಂದು ಅಗತ್ಯಕ್ಕಾಗಿ ಬರುವ ಕಛೇರಿಯಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಾದ ಜನರಿಗೆ ಕನಿಷ್ಠ ಕುಳಿತುಕೊಳ್ಳಲು, ನಿಲ್ಲಲೂ ಓಡಾಡಲೂ ಸ್ಥಳವಿಲ್ಲದ ಈ ಸ್ಥಿತಿಗೆ ಕಟ್ಟಡ ನಿರ್ಮಾಣದ ತಂತ್ರಗಳೇ ಅರಿಯದ ತಾಂತ್ರಿಕ ಸಲಹಾ ತಂಡವೇ ಕಾರಣ ಎಂದು ಜನಸಾಮಾನ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೇನು ಮಾಡಲು ಸಾದ್ಯವೋ ತಿಳಿಯದು ಸುಳ್ಯ ತಹಶಿಲ್ದಾರರ ಕೊಠಡಿಯ ಕೂಗಳತೆ ದೂರದಲ್ಲಿನ ಈ ಅವ್ಯವಸ್ಥೆ ಸರಿಪಡಿಸಬೇಕೆಂದು ಅವರಿಗಾದರೂ ಇನ್ನು ಯಾವಾಗ ಅನಿಸುತ್ತದೋ ಕಾದು ನೋಡಬೇಕಿದೆ.


