ಸಂಸದ ಶಶಿ ತರೂರ್ ನಡೆ ಕಾಂಗ್ರೆಸ್ ನಾಯಕರಲ್ಲಿ ಹುಟ್ಟಿಸಿದ ಹಲವು ಸಂಶಯ !

ಬಿಹಾರ ಚುನಾವಣಾ ಪಲಿತಾಂಶ ಪ್ರಕಟವಾದ ನಂತರದ ಸಂಸತ್ತಿನ ನಿರ್ಣಾಯಕ ಅಧಿವೇಶನ ಸೋಮವಾರ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪಕ್ಷದೊಂದಿಗಿನ ಸಂಬಂಧ ಮತ್ತು ಅವರ ನಡೆಗಳು ಹಲವು ಚರ್ಚೆಗಳನ್ನು ಹುಟ್ಟು ಹಾಕಿರುತ್ತದೆ.

Shashi

ಚಳಿಗಾಲದ ಅಧಿವೇಶನದ ಮುನ್ನಾದಿನವಾದ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಅತೀ ಪ್ರಮುಖ ಸಭೆ ಪಕ್ಷದ ಕಾರ್ಯಕಾರೀ ಸಭೆಗೆ (ಸಿಡಬ್ಲ್ಯುಸಿ) ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೀಗ ಎರಡನೇ ಬಾರಿಗೆ ಗೈರುಹಾಜರಾಗಿರುವುದು ಪಕ್ಷದ ಮತ್ತು ರಾಜಕೀಯ ವಿಶ್ಲೇಷಕರ ಮಧ್ಯೆ ವಿವಿಧ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಈ ಮಹತ್ವದ ಸಭೆಯು ಬಾನುವಾರದಂದು ಶ್ರೀಮತಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು.

CWC

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗಳ ವಿವಾದಾತ್ಮಕ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಮತ್ತು ರಾಷ್ಟ್ರೀಯ ಭದ್ರತೆಯ ವಿಷಯದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಒತ್ತಾಯಿಸುವಲ್ಲಿಂದ ಅಧಿವೇಶನವು ಪ್ರಾರಂಭವಾಗಿರುತ್ತದೆ.

Leave a Reply

Your email address will not be published. Required fields are marked *