ಕಡಬದಲ್ಲಿ ಪ್ರಜಾಧ್ವನಿ ಕರ್ನಾಟಕ ಮತ್ತು ಸಂತ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಸಂವಿದಾನ ದಿನಾಚರಣೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಡಿ.1 ನವೆಂಬರ್ 26 ರ ಸಂವಿಧಾನ ದಿನಾಚರಣೆ ಮತ್ತು ಪಿಯು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಸಂತ ಜೋಕಿಮ್ಸ್ ಪದವಿ ಪೂರ್ವ ಕಾಲೇಜ್ ಸಭಾಭವನದಲ್ಲಿ ಪ್ರಜಾಧ್ವನಿ ಕರ್ನಾಟಕ ಹಾಗೂ ಸಂತ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ನಡೆಯಿತು.

ಪ್ರಜಾಧ್ವನಿ ಕರ್ನಾಟಕ ತಂಡ ಕಳೆದ ಕೆಲವಾರು ಸಮಯಗಳಿಂದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಿದಾನದ ಬಗ್ಗೆ ಜಾಗೃತಿ ಮೂಡಿಸುವ ವಿಷಯವಾಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುತ್ತಿದ್ದು ಈಬಾರಿ ಕಡಬದ ಸಂತ ಜೋಕಿಮ್ಸ್ ಪದವಿ ಪೂರ್ವ ಕಾಲೇಜ್ ಅನ್ನು ಆಯ್ಕೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂವಿದಾನದ ಬಗ್ಗೆ ವಿಚಾರ ಮಂಢನೆಯನ್ನು ಮತ್ತು ಸಂವಾದ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಡಾಕ್ಟರ್ ಆಂಟನಿ ಟಿ.ಪಿ ರವರು ವಹಿಸಿ ಭಾರತದ ಸಂವಿದಾನ ವಿಶ್ವದ ಇತರೇ ಸಂವಿದಾನಗಳಿಂದ ಯಾಕೆ ಶ್ರೇಷ್ಠವಾಗಿದೆ ? ಹಾಗೂ ಯಾಕೆ ಆದರ್ಶಪ್ರಾಯವಾಗಿದೆ ? ಈ ಸಂವಿದಾನದ ಅಗತ್ಯ ಮತ್ತು ಅದನ್ನು ಸಂರಕ್ಷಿಸಬೇಕಾದ ಅಗತ್ಯದ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು.
ದೇಶದಲ್ಲಿ ವಿವಿಧ ರೀತಿಯ ತಮ್ಮದೇ ಧಾರ್ಮಿಕ ಕಾನೂನುಗಳಿರುವ ಜನರು ಇದ್ದು ಸರ್ವಜನಾಂಗವೂ ಜಾತಿಧರ್ಮಗಳಿಗೆ ಅತೀವವಾಗಿ ಒಂದಾಗಿ ಬಾಳಲು ಭಾರತದಲ್ಲಿ ಪೂರಕವಾಗಿ ಬರೆಯಲ್ಪಟ್ಟ ಸಂವಿದಾನ ಡಾಕ್ಟರ್ ಬಾಭಾಸಾಹೇಬ್ ಅಂಬೇಡ್ಕರ್ ಬರೆದ ಸಂವಿದಾನ. ಈ ಶ್ರೇಷ್ಠ ಸಂವಿದಾನ ಉಳಿಸಬೇಕಾದ ಅನಿವಾರ್ಯತೆ ಮುಂದಿನ ಕಾಲಘಟ್ಟದಲ್ಲಿ ಬದುಕುವ ಈಗಿನ ವಿಧ್ಯಾರ್ಥಿಗಳಾದ ತಮ್ಮ ಭವಿಷ್ಯದ ಬದುಕಿಗೆ ಬಹಳ ಅಗತ್ಯ

ವಿಶೇಷ ಅತಿಥಿಯಾಗಿ ಭಾಗವಹಿಸಿದ ಸಿವಿಲ್ ಸರ್ವಿಸ್ ವಿಷಯದಲ್ಲಿ ವಿಧ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಲು ಪ್ರಯತ್ನಿಸುತ್ತಿರುವ
ಶ್ರೀ ಮುಸ್ತಫಾ ಮಾತನಾಡಿ ದೇಶದಲ್ಲಿ ವಿವಿಧ ರೀತಿಯ ತಮ್ಮದೇ ಧಾರ್ಮಿಕ ಕಾನೂನುಗಳಿರುವ ಜನರು ಇದ್ದು ಸರ್ವಜನಾಂಗವೂ ಜಾತಿಧರ್ಮಗಳಿಗೆ ಅತೀವವಾಗಿ ಒಂದಾಗಿ ಬಾಳಲು ಭಾರತದಲ್ಲಿ ಪೂರಕವಾಗಿ ಬರೆಯಲ್ಪಟ್ಟ ಸಂವಿದಾನ ಡಾಕ್ಟರ್ ಬಾಭಾಸಾಹೇಬ್ ಅಂಬೇಡ್ಕರ್ ಬರೆದ ಸಂವಿದಾನ. ಈ ಶ್ರೇಷ್ಠ ಸಂವಿದಾನ ಉಳಿಸಬೇಕಾದ ಅನಿವಾರ್ಯತೆ ಮುಂದಿನ ಕಾಲಘಟ್ಟದಲ್ಲಿ ಬದುಕುವ ಈಗಿನ ವಿಧ್ಯಾರ್ಥಿಗಳಾದ ತಮ್ಮ ಭವಿಷ್ಯದ ಬದುಕಿಗೆ ಬಹಳ ಅಗತ್ಯ ಎಂದರು. ಹಾಗೂ ಸಂವಾದದಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಫಾದರ್ ಪ್ರಕಾಶ್ ಪೌಲ್ ಡಿಸೋಜ ವಹಿಸಿ ಅಧ್ಯಕ್ಷ ಭಾಷಣವನ್ನು ಮಾಡಿದರು.ಪ್ರಜಾಧ್ವನಿಯ ಅಧ್ಯಕ್ಷರಾದ ಶ್ರೀ ಅಶೋಕ್ ಎಡಮಲೆಯವರು ಪ್ರಜಾಧ್ವನಿಯ ಹುಟ್ಟು ಅದರ ಕಾರ್ಯವೈಖರಿ ಬಗ್ಗೆ ಸಭೆಗೆ ತಿಳಿಸಿದರು

ಜಾನಿ.ಕೆ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಮೋಸ್ ಅಕಾಡೆಮಿಯು ಮುಖ್ಯಸ್ಥ ಜೋಮೋನ್ ರವರು ಸಭೆಗೆ ಸಂವಿದಾನ ಪೀಠಿಕೆಯ ಪ್ರಮಾಣ ಭೋಧಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀ ಕಿರಣ್ ಕುಮಾರ್ ಮತ್ತು ವಿಧ್ಯಾರ್ಥಿ ನಾಯಕ ಮತ್ತು ನಾಯಕಿ ಉಪಸ್ತಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಜಾಧ್ವನಿಯ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ ,ಪ್ರದಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ ,ಹಿರಿಯ ಸದಸ್ಯರಾದ ಮೊಹಮ್ಮದ್ ಕುಂಞಿ ಗೂನಡ್ಕ, ಮಹೇಶ್ ಬೆಳ್ಳಾರ್ಕರ್ ,ವಕೀಲರಾದ ಮೋಹನ್. ಕೆ.ಪಿ ಕಡಬ ಭಾಗದ ಪಂಚಾಯತ್ ಸದಸ್ಯರು ಕಾರ್ಮಿಕ ನಾಯಕರು ಆದ ಶಿವಶಂಕರ್ ,ಮಂಜುನಾಥ್ ಮಡ್ತಿಲ ,ಮಹಿಳಾ ಸದಸ್ಯರಾದ ಶ್ರೀಮತಿ ಪ್ರಮಿಳಾ ಪೆಲ್ತಡ್ಕ, ಫಿಲೋಮಿನಾ ಕ್ರಾಸ್ತ ಮತ್ತು ಸಂತ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ಶಿಕ್ಷಕ ವೃಂದ ಮತ್ತು ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಉಪಸ್ತಿತರಿದ್ದರು.

