ಶಕ್ತಿಯಿಂದ ಯೋಜನೆಯಿಂದ ದೇಗುಲಗಳ ಆದಾಯ ಗಣನೀಯವಾಗಿ ಹೆಚ್ಚಳ: ಸಚಿವ ರೆಡ್ಡಿ

ಬೆಂಗಳೂರು: ಸಿದ್ದರಾಮಯ್ಯ ಸರಕಾರದ ಶಕ್ತಿ ಯೋಜನೆಯಿಂದ ದೇವಸ್ಥಾನಗಳ ಆದಾಯ ಗಣನೀಯವಾಗಿ ವೃದ್ಧಿಸಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕೋರಮಂಗಲ ನಂಜಪ ರೆಡ್ಡಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಆಯೋಜಿಸಿದ್ದ 43ನೇ ವೈಕುಂಠ ಏಕಾದಶಿ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದ ಅವರು, ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿ ರುವುದರಿಂದ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಬೇಟಿ ನೀಡುತ್ತಿರುವ ಪರಿಣಾಮ ದೇವಸ್ಥಾನದ ಸುತ್ತ ಮುತ್ತ ಹೂವು, ಹಣ್ಣು ಭರ್ಜರಿ ವ್ಯಾಪಾರವಾಗುತ್ತಿದೆ. ಇದ್ದರಿಂದ ಹೆಚ್ಚಿನ ಎಲ್ಲಾ ದೇವಸ್ತಾನಗಳ ಆದಾಯ ಗಣನೀಯವಾಗಿ ವೃದ್ದಿಸಿದೆ.

ಸಚಿವ ರಾಮಲಿಂಗಾರೆಡ್ಡಿ ಅವರು ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಶಕ್ತಿ ಯೋಜನೆಯಿಂದ ಕೇವಲ ದೇವಸ್ತಾನಗಳ ಆಸ್ತಿ ಮಾತ್ರ ವೃಧ್ದಿಯಾದುದಲ್ಲ ದೇವಸ್ತಾನದ ಸುತ್ತಮುತ್ತಲಿನ ಎಲ್ಲಾ ವ್ಯಾಪಾರಸ್ತರು ಕೂಡಾ ಆರ್ಥಿಕವಾಗಿ ಸಬಲವಾಗುತ್ತಿದ್ದಾರೆ ಎಂದರು.

ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯುತ್ತಿದೆ. ಭಕ್ತಾದಿಗಳಿಗೆ ಸುವ್ಯವಸ್ಥೆ ಮಾಡಲಾಗಿದೆ. ವೈಕುಂಠ ಏಕಾದಶಿ ಅತ್ಯಂತ ವಿಜೃಂಭಣೆ ಯಿಂದ ನಡೆಯುತ್ತಿದ್ದು, 40 ಸಾವಿರ ಬಾಡುಗಳನ್ನು ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆಗಳಿಗೆ ಮತ್ತು ರಾಜ್ಯದ ಅಭಿವೃದ್ಧಿಗೆ ದೇವರಲ್ಲಿ ಪ್ರಾರ್ಥಿಸಿರುವು ದಾಗಿ ತಿಳಿಸಿದರು.

ಟ್ರಸ್ಟ್‌ ಅಧ್ಯಕ್ಷ ಎಸ್.ಜಯರಾಮರೆಡ್ಡಿ, ಟ್ರಸ್ಟಿಗಳಾದ ಪುರು ಷೋತ್ತಮ್ ರೆಡ್ಡಿ, ಸೋಮಶೇಖರ್‌ರೆಡ್ಡಿ, ವೇಣು ಗೋಪಾಲ್ ರೆಡ್ಡಿ, ಚಂದ್ರಪ್ಪ ಹಾಗೂ ಕೋರಮಂಗಲ ಗ್ರಾಮಸ್ಥರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *