ಕೋಲಾರ: ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ, ಇದರ ವತಿಯಿಂದ ಕೋಲಾರ ಜಿಲ್ಲಾ ಸಮಿತಿ ಸಭೆ , ಜಿಲ್ಲೆ ಹಾಗೂ ತಾಲೂಕು ಸಮಿತಿಗಳ ರಚನೆ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ

ಕೋಲಾರದ ನಚಿಕೇತನ ನಿಲಯದ ಬಳಿಯಿರುವ ಬುದ್ಧಮಂದಿರದಲ್ಲಿ ಜಿಲ್ಲಾ ಹಾಗೂ ತಾಲೂಕುಗಳ ಘಟಕಗಳ ಸಮಿತಿ ರಚನೆ ಪದಾಧಿಕಾರಿಗಳ ಆಯ್ಕೆ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಭಾನುವಾರ ನಡೆಯಿತು.

ಕಾರ್ಯಕ್ರಮಕ್ಕೆ ರಾಜ್ಯ ನಾಯಕರು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕುಣಿಗಲ್ ರಮೇಶ್, ರಾಜ್ಯಾಧ್ಯಕ್ಷರಾದ ಶ್ರೀ ಓಂಕಾರಪ್ಪ ಎಂ ತರೀಕೆರೆ, ಡಿ. ಚಂದ್ರಶೇಖರ್ ರಾಜ್ಯ ಕಾರ್ಯಾಧ್ಯಕ್ಷರು,
ಟಿ. ಶಿವಶಂಕರ ರಾಜ್ಯ ಕಾರ್ಯಧ್ಯಕ್ಷರು, ಮೋಹನ್ ಸಿ ರಾಜ್ಯ ವಕ್ತಾರರು, ಕೆ.ಎಚ್. ವೆಂಕಟೇಶ್ ಕೋಲಾರ–ಚಿಕ್ಕಬಳ್ಳಾಪುರ ವಿಭಾಗ ಉಪಾಧ್ಯಕ್ಷರು, ಹಳ್ಳಿ ಕೃಷ್ಣ ಬೆಂಗಳೂರು ನಗರ ಉಪಾಧ್ಯಕ್ಷರು, ಹಾಗೂ ಹಲವು ರಾಜ್ಯ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಭಗವಾನ್ ಬುದ್ಧರು ಮತ್ತು ಕುವೆಂಪು ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಹಾಗೂ ಕ್ಯಾನ್ಡಲ್ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮುಖ್ಯ ಭಾಷಣ ಮಾಡಿದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕುಣಿಗಲ್ ರಮೇಶ್ ಅವರು “ಭ್ರಷ್ಟಾಚಾರ ರಾಜ್ಯದ ಅನೇಕ ಇಲಾಖೆಗಳಲ್ಲಿ ಬೇರುಬಿಟ್ಟಿರುವ ಗಂಭೀರ ಸಾಮಾಜಿಕ ಸಮಸ್ಯೆ. ಮಾಹಿತಿ ಹಕ್ಕು ಬಳಕೆ, ಜವಾಬ್ದಾರಿಯುತ ಹೋರಾಟ ಮತ್ತು ಜನಪರ ಚಟುವಟಿಕೆಗಳ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗಾಗಿ ನಮ್ಮ ಸಂಘಟನೆ ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತದೆ. ಪದಾಧಿಕಾರಿಗಳು ಧೈರ್ಯವಾಗಿ ಪ್ರಶ್ನಿಸಿ, ಪಾರದರ್ಶಕ ಆಡಳಿತಕ್ಕೆ ಒತ್ತಡ ತರಬೇಕು ಎಂದು ಅವರು ಹೇಳಿದರು. ಸಂಘಟನೆಯ ಶಿಸ್ತು, ಕಾರ್ಯಪದ್ಧತಿ ಮತ್ತು ಜನಪರ ಬದ್ಧತೆಯ ಕುರಿತು ಮಾಹಿತಿ ನೀಡಿದರು.

ಜಿಲ್ಲಾಅಧ್ಯಕ್ಷರಾದ ಶ್ರೀ ರವಿಕುಮಾರ್ ಹೆಚ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರಾಮಾಂಜಪ್ಪ ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರವಿ ಜಿ.ಎಂ ಬೇಟಪ್ಪ, ಜಿಲ್ಲಾ ಕಾರ್ಯಾಧ್ಯಕ್ಷರು
ಶ್ರೀ ನರಸಿಂಹಮೂರ್ತಿ ಡಿ.ಎಂ, ಜಿಲ್ಲಾ ಸಂಚಾಲಕರು ಶ್ರೀ ಸೋಮಸುಂದರ್ ರೆಡ್ಡಿ, ಜಿಲ್ಲಾ ಗೌರವಾಧ್ಯಕ್ಷರು ಶ್ರೀ ಭಂಗವಾದಿ ನಾರಾಯಣಪ್ಪ ಇವರು ಸಂಘಟನೆಯ ಬಲವರ್ಧನೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಅಗತ್ಯವನ್ನು ಪ್ರಸ್ತಾಪಿಸಿ ಮಾತನಾಡಿದರು.

ಕೋಲಾರ ತಾಲೂಕು ಘಟಕ ಅಧ್ಯಕ್ಷರಾದ ಶ್ರೀ ಆನಂದ್ ಸಿ,ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್, ಉಪಸ್ತಿತರಿದ್ದರು.

ಈ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲೂಕು ಸಮಿತಿ ರಚನೆಗೊಂಡು ಶ್ರೀ ರಾಮಾಂಜಪ್ಪ ಬಿ ಶ್ರೀನಿವಾಸ್ ಪುರ ತಾಲೂಕು ಅಧ್ಯಕ್ಷರು, ಶ್ರೀ ಆಂಜಪ್ಪ ತಾಲೂಕು ಪ್ರಧಾನ ಕಾರ್ಯದರ್ಶಿ,
ಕೆಜಿಎಫ್ ತಾಲೂಕು ಘಟಕಕ್ಕೆ ಶ್ರೀ ಮನೋಹರ್ ತಾಲೂಕ ಅಧ್ಯಕ್ಷರು, ಶ್ರೀ ಇರ್ಷಾದ್ ಅಹ್ಮದ್ ತಾಲೂಕು ಪ್ರಧಾನ ಕಾರ್ಯದರ್ಶಿ, ಬಂಗಾರಪೇಟೆ ತಾಲೂಕು ಅಧ್ಯಕ್ಷರಾಗಿ ಪ್ರಭಾವತಿ ಆಯ್ಕೆಯಾಗಿ, ವಿವಿಧ ತಾಲೂಕುಗಳ ಘಟಕದ ಸದಸ್ಯರುಗಳಾಗಿ ವೆಂಕಟರಾಜಮ್ಮ, ಪ್ರಭಾವತಿ, ಶ್ರೀ ವೆಂಕಟೇಶಪ್ಪ, ಶ್ರೀ ಯಾದವ್ ರೆಡ್ಡಿ, ಶ್ರೀ ರಮೇಶ್, ಶ್ರೀ ಮೋಹನ್, ಶ್ರೀ ಸುನಿಲ್, ಶ್ರೀ ಹರೀಶ್, ಶ್ರೀ ನಾಗರಾಜ, ಶ್ರೀ ಅಂಜನಪ್ಪ ಸಿ, ಶ್ರೀ ಅಶೋಕ್ ಕುಮಾರ್, ಶ್ರೀ ಪವನ್ ಕುಮಾರ್ ಆಯ್ಕೆಯಾದರು.

ಸುಮಾರು 40ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಬಳಿಕ ಸಂಘಟನೆಯ ಪ್ರತಿನಿಧಿಗಳು ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ
ಇವುಗಳಿಗೆ ಭೇಟಿ ನೀಡಿ, ಜನಸಾಮಾನ್ಯರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರ ಸಂಬಂಧಿತ ವಿಷಯಗಳ ಕುರಿತು ಅಧಿಕೃತ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *