ಸಾಂಸ್ಕೃತಿಕ ವೈಭವದೊಂದಿಗೆ ಚಾಲನೆಗೊಂಡ ಅಕ್ಷಯ್ ಕೆ.ಸಿ ನೇತೃತ್ವದ ಸುಳ್ಯೋತ್ಸವ

ವರ್ಷಂಪ್ರತಿ ನಡೆಯುವ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಭಾಗವಾಗಿ ಸುಳ್ಯದ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ ಯವರ ನೇತೃತ್ವದಲ್ಲಿ 2026 ರ ಅದ್ದೂರಿಯ ಸುಳ್ಳೋತ್ಸವಕ್ಕೆ ಇಂದು ಸಂಜೆ ಚಾಲನೆ ನೀಡಲಾಯಿತು.

ಅಕಾಡೆಮಿ ಆಪ್‌ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ರಾದ ಡಾ. ಕೆ. ವಿ. ಚಿದಾನಂದ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಶುಭ ಹಾರೈಸಿದರು.

ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕಮೊತ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸುಳ್ಳೋತ್ಸವ ಸಮಿತಿ ಅಧ್ಯಕ್ಷ ಸತೀಶ್‌ ಕೆ. ಜಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಿತಿ ನಿರ್ದೇಶಕರಾದ ಹರಿರಾಯ ಕಾಮತ್, ಗಣೇಶ್ ಆಳ್ವ, ಅಭಿಷೇಕ್ ಕೇಕಡ್ಕ, ಶೈಲೇಂದ್ರ ಸರಳಾಯ, ಸನತ್ ಆಕ್ರೋ, ಕಾರ್ತಿಕ್ ಕುಡೆಕಲ್ಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಝೀ ವಾಹಿನಿಯ ಮಹಾನಟಿ ಶೋ ಇದರ ವಿನ್ನರ್ ಆಗಿರುವ ಸ್ಥಳೀಯ ಕಲಾವಿದೆ ಕು. ವಂಶಿ ರತ್ನಾಕರ್ ರವರನ್ನು ಸಮಿತಿ ವತಿಯಿಂದ ಶಾಲು, ಹಾರ, ಪೇಟ ತೊಡಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸು ಫ್ರಮ್ ಸೋ ಚಲನ ಚಿತ್ರದ ಡಾನ್ಸ್ ಕೊರಿಯಾಗ್ರಾಫರ್ ಮಂಗಳೂರಿನ ವಿನಾಯಕ ಆಚಾರ್ಯರವರನ್ನು ಅಭಿನಂದಿಸಲಾಯಿತು. ಆರ್. ಜೆ ತ್ರಿಶೂಲ್ ಕಂಬಳ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *