ಅನಿಶ್ಚಿತ ರಾಜಕೀಯದಿಂದಾಗಿ ಕುಂಟುತ್ತಾ ಸಾಗಿದ ಭಾರತದ ಆರ್ಥಿಕತೆಗೆ ಹೊಸ ಆರ್ಥಿಕ ಚೈತನ್ಯವನ್ನು ತುಂಬಿದ ವ್ಯಕ್ತಿ ಮಾಜೀ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ : ಮುಖ್ಯಮಂತ್ರಿ ಸಿದ್ದರಾಮಯ್ಯ.
ಭಾರತ ಅನಿಶ್ಚಿತ ರಾಜಕೀಯದಿಂದಾಗಿ ಕುಂಟುತ್ತಾ ಸಾಗಿದ್ದಾಗ ದೇಶದ ಆರ್ಥಿಕತೆಗೆ ಹೊಸ ಆರ್ಥಿಕ ನೀತಿಯ ಮೂಲಕ ಚೈತನ್ಯವನ್ನು ತುಂಬಿದ ಮಹಾನ್ ವ್ಯಕ್ತಿ ಮಾಜೀ ಪ್ರಧಾನಿ ದಿವಂಗತ ಡಾ ಮನಮೋಹನ್ ಸಿಂಗ್ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಮಾಜೀ ಪ್ರದಾನಿ ಮನಮೋಹನ್ ಸಿಂಗ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಹೇಳಿದರು. ಭಾರತವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿದ್ದವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ .

ಯುಪಿಎ ಅಧಿಕಾರಾವಧಿಯಲ್ಲಿ ಪ್ರಧಾನಿಯಾಗಿ ಡಾ. ಸಿಂಗ್ ಅನುಷ್ಠಾನಕ್ಕೆ ತಂದಿರುವ ಉದ್ಯೋಗ ಖಾತ್ರಿಯ ಮನರೇಗಾ ಯೋಜನೆ, ಶಿಕ್ಷಣ ಮತ್ತು ಮಾಹಿತಿ ಹಕ್ಕಿನ ಕಾನೂನುಗಳು, ರೈತರ ಬ್ಯಾಂಕ್ ಸಾಲ ಮನ್ನಾ ಮತ್ತು ಇ-ಆಡಳಿತವನ್ನು ಸುಗಮಗೊಳಿಸುವ ಆಧಾರ್ ಗುರುತಿನ ಚೀಟಿಯ ಜಾರಿಗಾಗಿ ಅವರು ಕೈಗೊಂಡಿದ್ದ ದಿಟ್ಟ ನಿರ್ಧಾರಗಳು ಅವರ ಜನಪರ ಕಾಳಜಿ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿವೆ.
ವಿಶ್ವವಿಖ್ಯಾತ ಆರ್ಥಿಕ ತಜ್ಞ, ಮುತ್ಸದ್ದಿ ನಾಯಕ, ಆದರ್ಶ ರಾಜಕಾರಣಿ ಗೌರವಾನ್ವಿತ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಹೆಮ್ಮೆಯಿಂದ ನೆನೆದು, ನಮಿಸುತ್ತೇನೆ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿದರು.

