ಕುಕ್ಕುಜಡ್ಕದಲ್ಲಿ ವಿಜ್ರಂಭಣೆಯಿಂದ ನಡೆದ 28 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಮುನಿಸುತರವೇ ಮುಗುದೇ ಎನ್ನುವ ಭಾವಗೀತೆ ಯಾರಿಗೆ ನೆನಪಿಲ್ಲ ಹೇಳಿ ?
ಇಡೀ ಕನ್ನಡಿಗರು ಒಮ್ಮೆಯಾದರೂ ಗುನುಗದೇ ಇರಲು ಸಾಧ್ಯವೇ ಇಲ್ಲದ ಈ ಭಾವಗೀತೆಯ ಜನ್ಮಸ್ಥಳವೇ ಸುಳ್ಯ ತಾಲೂಕಿನ ಕುಕ್ಕುಜಡ್ಕ ಎನ್ನಬಹುದು. ಆದ್ದರಿಂದ ಕುಕ್ಕುಜಡ್ಕ ಎಂದಾಕ್ಷಣವೇ ಮೊದಲು ಕಣ್ಣಮುಂದೆ ಬರುವುದೇ ಸುಳ್ಯದ ಅನೇಕ ಹಿರಿಯ ವಿಧ್ಯಾರ್ಥಿಗಳ ಪ್ರೀತಿಯ ಗರುಗಳು ,ಮತ್ತು ಹಿರಿಯ ಸಾಹಿತಿಗಳೂ ಆದ ಸುಬ್ರಾಯ ಚೊಕ್ಕಾಡಿಯವರು.
ಇವರು ಸುಳ್ಯ ತಾಲೂಕಿನ ಹೆಮ್ಮೆ.

ಇದು ಸಾಹಿತ್ಯ ಲೋಕದ ಭಗೀರಥ ಸನ್ಮಾನ್ಯ ಸುಬ್ರಾಯ ಚೊಕ್ಕಾಡಿಯವರ ಸಾಹಿತ್ಯದ ಗತ್ತು ಕೂಡಾ ಹೌದು. ಇವತ್ತು ಅವರದೇ ಊರಿನಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಾಹಿತ್ಯಪ್ರೇಮಿಗಳ ಮೈನವಿರೇಳಿಸುವ ಭಾವನಾತ್ಮಕ ಕ್ಷಣವಾಗಿ ಮಾರ್ಪಟ್ಟಿತು.
ಸುಳ್ಯ ವಿದಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥೀ ಮುರುಳ್ಯ ರವರು ಮಾತನಾಡುತ್ತಾ ಇದೇ ವಿಷಯವನ್ನು ಪ್ರಸ್ತಾಪಿಸಿದರು.

ಡಿ.30 ರಂದು ಅಮರಮುಡ್ನೂರಿನ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯ ಸಭಾಂಗಣದ ಡಾ.ಪೈಲೂರು ಗೋಪಾಲಕೃಷ್ಣ ವೇದಿಕೆಯಲ್ಲಿ ನಡೆದ ಸುಳ್ಯ ತಾಲೂಕಿನ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಂಟಮಲೆ ಎಂಬ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸುತ್ತಾ ಅವರು ಮಾತನಾಡಿದರು. ಪ್ರಕೃತಿಯಲ್ಲಿನ ಪ್ರತಿಯೊಂದು ವಿಷಯಗಳ ಬಗ್ಗೆ ಬರೆಯಬಲ್ಲವರು ಸಾಹಿತಿಗಳು ,ಸಾಹಿತಿಗಳು ಬರೆದ ಪುಸ್ತಕಗಳ ಬಗ್ಗೆ ಪ್ರಚಾರ ಕಾರ್ಯ ನಡೆಯಬೇಕು ಸಾಹಿತ್ಯ ಕ್ಷೇತ್ರ ನಿಂತನೀರಾಗದೇ ಹರಿಯುವ ನೀರಿನಂತಿರಬೇಕು .ಸಾಹಿತ್ಯಲೋಕದಲ್ಲಿ ವ್ಯಸನ ಮುಕ್ತ ಸಮಾಜಮುಖಿ ಪರಿವರ್ತನೆ ಆಗಲಿ. ಸಾಹಿತಿಗಳು ಆಕಾಶದಲ್ಲಿ ಇರುವ ನಕ್ಷತ್ರದಂತೆ ಸದಾ ಹೊಳೆಯುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ಅಧ್ಯಕ್ಷರಾದ ಶ್ರೀ ತೇಜಕುಮಾರ್ ಕೆ.ಆರ್ ಬಡ್ಡಡ್ಕರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಸಾಹಿತಿಗಳಾದ ಶ್ರೀ ಸುರೇಶ್ ಕಂಜರ್ಪಣೆ ದೀಪಬೆಳಗಿಸುವ ಮೂಲಕ 28 ನೇ ಸುಳ್ಯ ತಾಲೂಕು ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕ್ರತಿ ಅಕಾಡೆಮಿ ಅಧ್ಯಕ್ಷ ಶ್ರೀ ಸದಾನಂದ ಮಾವಾಜಿಯವರು ಸಮ್ಮೇಳನಾಧ್ಯಕ್ಷ ತೇಜಕುಮಾರ್ ಬಡ್ಡಡ್ಕ ರವರು ಬರೆದ ಮಜಲಿನಾಚೆ ಎನ್ನುವ ಮತ್ತು ಮಮತಾ ರವೀಶ್ ಪಡ್ಡಂಬೈಲು ರವರು ಬರೆದ ಗುಬ್ಬಿದನಿ ಎನ್ನುವ ಕೃತಿಗಳನ್ನು ಬಿಡುಗಡೆಗೊಳಿಸಿದರು .

ಕಾರ್ಯಕ್ರಮದ ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ ,ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಶ್ರೀನಾಥ. ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಡಬಾಗಿಲು, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಲ, ಗೌರವ ಕಾರ್ಯದರ್ಶಿ ಚಂದ್ರಮತಿ ಕೆ, ಮುಖ್ಯ ಶಿಕ್ಷಕ ಸಂಕೀರ್ಣ ಚಕ್ಕಾಡಿ ,ಸಾಹಿತಿ ಬಾಬು ಗೌಡ ಅಚ್ರಪಾಡಿ, ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಕೊಡಗು ಜಿಲ್ಲಾ ಕಸಪದ ಅಧ್ಯಕ್ಷ ಕೇಶವ ಕಾಮತ್, ಚಂದ್ರಾವತಿ ಬಡ್ಡಡ್ಕ, ಕೋಶಾಧಿಕಾರಿ ಅರುಣ ಕುಮಾರ ಮುಂಡಾಜೆ, ಉಪಸ್ಥಿತರಿದ್ದರು.

ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೆರಾಲು ರವರು ಪ್ರಸ್ತಾವನೆ ಮಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿದರು .ಸಾಹಿತಿ ಏಕೆ ಹಿಮಕರರ ಸಮ್ಮೇಳನ ಅಧ್ಯಕ್ಷರ ಪರಿಚಯ ಮಾಡಿದರು. ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಡಬಾಕಿಲು ವಂದಿಸಿದರು. ಚರಿಶ್ಮ ಕಡಪಲ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ಕಡಪಲ ಶ್ರೀಮತಿ ಭವ್ಯ ಸಹಕರಿಸಿದರು.


