ಸುಳ್ಯ: ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಪ್ರಯುಕ್ತ ಸ್ವಚ್ಛತಾ ಅಭಿಯಾನ
ಸುಳ್ಯ: ಸುಳ್ಯ ನಗರ ಪಂಚಾಯತ್, ಶ್ರೀ ರಾಮ ಭಜನಾ ಸೇವಾ ಸಂಘ (ರಿ.) ಜಟ್ಟಿಪಳ್ಳ, ಕಪಿಲ ಯುವಕ ಮಂಡಲ ಜಟ್ಟಿಪಳ್ಳ, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಗಜಕೇಸರಿ ನಡುಬೈಲು ಹಾಗೂ ಜಟ್ಟಿಪಳ್ಳದ ವಿವಿಧ ಸಂಘ–ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವು ದಿನಾಂಕ 04.01.2026ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಜಟ್ಟಿಪಳ್ಳ ದೇವರ ವಸಂತ ಕಟ್ಟೆಯಿಂದ ಸುಳ್ಯ ನಗರದ ಮುಖ್ಯ ರಸ್ತೆಯವರೆಗೆ ನಡೆಯಿತು.

ಕಾರ್ಯಕ್ರಮವನ್ನು ನಗರ ಪಂಚಾಯತ್ ಮುಖ್ಯಾಧಿಕಾರಿ ಮಾನ್ಯ ಶ್ರೀ ಬಸವರಾಜ ಅವರು, ಆಡಳಿತಾಧಿಕಾರಿ ಶ್ರೀಮತಿ ಮಂಜುಳ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಶ್ರೀ ಹರಿಶ್ಚಂದ್ರ ಎಂ.ಆರ್., ಉಪಾಧ್ಯಕ್ಷ ಶ್ರೀ ರಮಾನಂದ ರೈ, ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖಾ ಮಾಡಪ್ಪಾಡಿ ಹಾಗೂ ಪದಾಧಿಕಾರಿಗಳು, ಯುವಕ ಮಂಡಲದ ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಅನೇಕ ಸ್ಥಳೀಯರು ಭಾಗವಹಿಸಿದ್ದರು.

ಸ್ವಚ್ಛತಾ ಕಾರ್ಯಕ್ರಮದ ವೇಳೆ ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಶ್ರೀ ಮೋಹನ್ ದೇವರಗುಂಡ, ಐಡಿಯಲ್ ಐಸ್‌ಕ್ರೀಮ್ ಮಾಲೀಕ ಶ್ರೀ ಗಣೇಶ್, ಕಾನತ್ತಿಲ ಸ್ಟೋರ್ ಮಾಲೀಕರಾದ ಶ್ರೀ ದಿನಕರ ಕಾನತ್ತಿಲ ಹಾಗೂ ಶ್ರೀ ಯಜ್ಞೇಶ್ ಕಾನತ್ತಿಲ, ಮಂಗಳೂರು ಆರೋಗ್ಯ ಇಲಾಖೆಯ ಬೀದಿ ನಾಟಕ ತಂಡದ ಶ್ರೀ ದಿನೇಶ್ ಅತ್ತಾವರ ಅವರು ತಂಪು ಪಾನೀಯ, ಹಣ್ಣುಹಂಪಲು ಮತ್ತು ಐಸ್‌ಕ್ರೀಮ್ ವಿತರಿಸಿ ಸಹಕರಿಸಿದರು. ಮಧ್ಯಾಹ್ನ ಶ್ರೀ ರಾಮ ಭಜನಾ ಸೇವಾ ಸಂಘದ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಷನ್ ಚಾರಿಟಬಲ್ ಟ್ರಸ್ಟ್ ಮೇಲ್ವಿಚಾರಕ ಶ್ರೀ ಸುಭಾಷ್, ಸ್ಥಳೀಯ ಹಿರಿಯರಾದ ಶ್ರೀ ಶುಭಕರ ಆಳ್ವ ಹಾಗೂ ಶ್ರೀ ಶಾಂತಪ್ಪ ಗೌಡ (ನಗರ ಪಂಚಾಯತ್ ವಾಹನ ಚಾಲಕರು) ಸಂಪೂರ್ಣ ಸಹಕಾರ ನೀಡಿದರು. ಭಜನಾ ಸಂಘದ ಕೋಶಾಧಿಕಾರಿ ಶ್ರೀ ಸಂತೋಷ್ ಶೆಟ್ಟಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಕಾರ್ಯದರ್ಶಿ ಶ್ರೀ ರಘುನಾಥ್ ಜಟ್ಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ, ದಿನಾಂಕ 08.01.2026ರ ಗುರುವಾರ ಜಟ್ಟಿಪಳ್ಳ ವಸಂತ ಕಟ್ಟೆಯಲ್ಲಿ ಮಧ್ಯಾಹ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರಿಗೆ ಆದರದ ಸ್ವಾಗತ ಎಂದು ಶ್ರೀ ರಘುನಾಥ್ ಜಟ್ಟಿಪಳ್ಳ ತಿಳಿಸಿದ್ದಾರೆ.

