ಚೀನಾ, ರಷ್ಯಾ, ಇರಾನ್, ಕ್ಯೂಬಾ ಜೊತೆಗಿನ ಸಂಬಂಧವನ್ನು ವಿಚ್ಛೇದಿಸಬೇಕು; ವೆನಿಸ್ವೆಲಗೆ ಟ್ರಂಪ್‌ರ ಹೊಸ ಆದೇಶ

ವಾಷಿಂಗ್ಟನ್: ಮಧ್ಯಂತರ ಸರಕಾರದ ಅಧ್ಯಕ್ಷ ಡೆಲ್ಸಿ ರೋಡ್ರಿಗಸ್‌ನ ಕೆಳಗಿರುವ ವೆನಸ್ವೆಲದ ಹೊಸ ಸರ್ಕಾರ ಚೀನಾ, ರಷ್ಯಾ, ಇರಾನ್, ಕ್ಯೂಬಾ ದೇಶಗಳೊಂದಿಗಿನ ಆರ್ಥಿಕ ಸಂಬಂಧವನ್ನು ವಿಚ್ಛೇದಿಸಬೇಕೆಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾಗಿ ವರದಿಯಾಗಿದೆ. ಇದರ ನಂತರ ಮಾತ್ರ ತೈಲ ಉತ್ಪಾದನೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಡುವುದಾಗಿ ಟ್ರಂಪ್ ಹೇಳಿದರು ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಉತ್ಪಾದನೆಯಲ್ಲಿ ವೆನಸ್ವೆಲ ಅಮೇರಿಕಾದೊಂದಿಗೆ ಮಾತ್ರ ಸಹಕರಿಸಿದರೆ ಸಾಕು, ಕಛ್ಛಾ ತೈಲವನ್ನು ಮಾರಾಟಮಾಡುವಾಗ ಅಮೇರಿಕಾಗೆ ಆಧ್ಯತೆ ಕೊಡಬೇಕು ಟ್ರಂಪ್ ಸರ್ಕಾರವು ತಿಳಿಸಿದೆಯೆಂದು ವರದಿಯಲ್ಲಿ ಹೇಳುತ್ತದೆ.

ಅಮೇರಿಕಾದ ಕಳೆದ ವಾರದ ದಾಳಿಯ ನಂತರ ವೆನಸ್ವೇಲ ರಾಜಕೀಯವಾಗಿ ಕಲುಷಿತ ಸ್ಥಿತಿಯಲ್ಲಿದೆ. ವೆನಸ್ವೇಲ ಅಧ್ಯಕ್ಷ ನಿಕೋಲಾಸ್ ಮಡುರೋಯೆ ರನ್ನು ಅಮೇರಿಕಾ ಸೆರೆಹಿಡಿದು ಗಡಿಪಾರು ಮಾಡಲಾಗಿತ್ತು.

ಡೆಲ್ಸಿ ರೋಡ್ರಿಗಸ್ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ವೆನಸ್ವೇಲದ ನಿಯಂತ್ರಣವು ಸ್ವತಃ ಟ್ರಂಪ್ ಹತೋಟಿಯಲ್ಲಿ ಇಟ್ಟುಕೊಳ್ಳಲಾಗುವುದು. ಎಂದು ಟ್ರಂಪ್ ಹೇಳಿರುತ್ತಾರೆ.

ಮೊದಲು ಚೀನಾ, ರಷ್ಯಾ, ಇರಾನ್, ಕ್ಯೂಬಾ ಮುಂತಾದ ದೇಶಗಳನ್ನು ವೆನಸ್ವೆಲವು ಹೊರಹಾಕುವ ಮತ್ತು ಆರ್ಥಿಕ ಸಂಬಂಧಗಳನ್ನು ವಿಚ್ಛೇದಿತಗೊಳಿಸುವ ನಿರ್ದಾರ ಮಾಡಬೇಕು. ಎರಡನೆಯದಾಗಿ, ತೈಲ ಉತ್ಪಾದನೆಯಲ್ಲಿ ಯುಎಸ್‌ನೊಂದಿಗೆ ಮಾತ್ರ ಸಹಕರಿಸಬೇಕು ಅಸಂಸ್ಕೃತ ತೈಲವನ್ನು ವಿತರಿಸುವಾಗ ಯುಎಸ್ ಗೆ ಪ್ರಥಮ ಆಧ್ಯತೆಯ ಆಯ್ಕೆಯನ್ನು ನೀಡಲು ವೆನಸ್ವೇಲ ಒಪ್ಪಿಕೊಳ್ಳಬೇಕು”-ಎಂದು ಟ್ರಂಪ್ ಹೇಳಿದರು.

ದೀರ್ಘಾಕಾಲದಿಂದ ವೆನಸ್ವೇಲದೊಂದಿಗೆ ಸಂಬಂಧವನ್ನು ಇರಿಸಿಕೊಂಡು ಇರುವುದು ಚೀನಾ ದೇಶವಾಗಿದೆ. ವೆನಸ್ವೇಲದದಿಂದ ಅತ್ಯಂತ ಹೆಚ್ಚು ತೈಲ ಖರೀದಿಸುವ ದೇಶ ಕೂಡ ಚೀನಾವೇ ಆಗಿದೆ. ಪ್ರಸ್ತುತ ತೈಲ ಟ್ಯಾಂಕರ್‌ಗಳು ತುಂಬಿರುವ ಕಾರಣ ತೈಲದ ವ್ಯಾಪಾರ ವ್ಯವಹಾರವನ್ನು ಭಾಧಿಸಬಹುದೆಂದು ವೆನಸ್ವೇಲದ ಮೇಲೆ ಒತ್ತಡ ಹೇರುವುದು ಅಮೇರಿಕಾಗೆ ಸಾಧ್ಯವಾಗಲಿದೆ ಎಂದು US ಸ್ಟೇಟ್ ಸೆಕ್ರೆಟರಿ ಮಾರ್ಕೊ ರೂಬಿಯೋ ಸೆನೆಟರ್ ಗಳೊಂದಿಗೆ ಹೇಳಿರುವ ವಿಷಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುಎಸ್ ನಿರ್ಭಂಧದ ಕಾರಣ ತೈಲ ಸಂಗ್ರಹಿಸಲು ಸ್ಥಳವಿಲ್ಲದ ಡಿಸೆಂಬರ್‌ ಕೊನೆಯ ವಾರದಿಂದ ವೆನಸ್ವೆಲ ತೈಲ ಬಾವಿಗಳನ್ನು ಮುಚ್ಚಲಾಯಿತು. ದೀರ್ಘಾವಧಿಗೆ ಪ್ರಸ್ತುತ ಸ್ಥಿತಿ ಮುಂದುವರೆದರೆ ಅದು ವೆನಸ್ವೆಲದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಅಮೇರಿಕಾದ ಲೆಕ್ಕಾಚಾರಗಳ ಪ್ರಕಾರ ತೈಲ ಸಂಗ್ರಹಣೆ ಮಾರಾಟವಾಗದೆ ಸಾಲಗಳ ಮರುಪಾವತಿ ನಡೆಸದೆ ಮುಂದೆ ಹೋಗಲು ಕೆಲವು ವಾರಗಳ ತಾಕತ್ತು ಮಾತ್ರವೇ ಇರುವುದು. ಎಂದು ಬ್ಲೂಂಬರ್ಗ್ ವರದಿಯಲ್ಲಿ ಹೇಳಲಾಗಿದೆ.

ಇದರ ಮಧ್ಯೆ ವೆನಸ್ವಲದ ಮಧ್ಯಂತರ ಸರಕಾರದ ಇತ್ತೀಚೆಗಿನ ಆಡಳಿತವು 30 ಮಿಲಿಯನ್ ನಿಂದ 50 ಮಿಲಿಯನ್ ಬ್ಯಾರಲ್ ವರೆಗೆ ತೈಲ ಅಮೇರಿಕಾಗೆ ವರ್ಗಾಯಿಸುತ್ತದೆ ಮತ್ತು ತೈಲ ಮಾರುಕಟ್ಟೆಗೆ ವ್ಯಾಪಾರ ಮಾಡುತ್ತದೆ. ಆ ನಿಧಿಗಳು ತಾನು ನಿಯಂತ್ರಿಸುವುದಾಗಿ ಟ್ರಂಪ್ ಹೇಳಿದ್ದು ,ಇದು ವೆನಸ್ವೆಲದಲ್ಲಿಯ ಜನರಿಗೆ ಮತ್ತು ಕರಾವಳಿಯ ಜನರಿಗೆ ಪ್ರಯೋಜನಕರವಾಗುವಂತೆ ಬಳಸಲಾಗುವುದು ಎಂದು ಟ್ರಂಪ್ ಹೇಳಿದರು.

Leave a Reply

Your email address will not be published. Required fields are marked *