ತಂಬಾಕು ಪ್ರಿಯರಿಗೆ ನ್ಯೂ ಇಯರ್ ಶಾಕ್ ಕೊಟ್ಟ ಕೇಂದ್ರ ಸರಕಾರ.
ತಂಬಾಕು ಪ್ರಿಯರಿಗೆ ನ್ಯೂ ಇಯರ್ ಶಾಕ್ ಕೊಟ್ಟ ಕೇಂದ್ರ ಸರಕಾರ.
ನವದೆಹಲಿ: ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲಾ ಮೇಲೆ ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಹೊಸ ಆರೋಗ್ಯ ಸುಂಖ ಮತ್ತು ರಾಷ್ಟ್ರೀಯ ಭದ್ರತಾ ಸುಂಕ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಡಿಸೆಂಬರ್ ನಲ್ಲಿ ಸಂಸತ್ತು ಅಂಗೀಕರಿಸಿತ್ತು.

ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಈ ಹೊಸ ಸುಂಕಗಳು ಜಿಎಸ್ಟಿ ದರಕ್ಕಿಂತ ಹೆಚ್ಚಿರಲಿದ್ದು, ಪ್ರಸ್ತುತ ವಿಧಿಸಲಾಗುತ್ತಿದ್ದ ಪರಿಹಾರ ಸೆಸ್‌ಗೆ ಬದಲಾಗಿ ಜಾರಿಯಾಗಲಿವೆ.
ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಇತರೆ ಸಮಾನ ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್ಟಿ ದರ ಅನ್ವಯವಾಗಲಿದೆ. ಬೀಡಿಗಳಿಗೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಲಾಗುವುದು ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗಿದ್ದು, ತಂಬಾಕು ಹಾಗೂ ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತದೆ.
ಬುಧವಾರ ಹಣಕಾಸು ಸಚಿವಾಲಯವು ಚೂಯಿಂಗ್ ತಂಬಾಕು, ಜರ್ದಾ, ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು-2026 ಅಧಿಸೂಚನೆಯನ್ನು ಪ್ರಕಟಿಸಿದೆ.

