ಸುಳ್ಯ ತಾಲೂಕಿಗೆ 60ರ ಸಂಭ್ರಮ ಆಚರಣಾ ಸಮಿತಿ ವತಿಯಿಂದ ನಡೆದ ವಿವಿಧ ಕಾರ್ಯಕ್ರಮ
ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ.

ಯುವಕರಿಗೆ ಉದ್ಯೋಗ ಸಿಗುವ ದೊಡ್ಡ ಯೋಜನೆ ಸುಳ್ಯಕ್ಕೆ ಬರಲಿ ಎಂದ : ಡಾ.ರೇಣುಕಾ ಪ್ರಸಾದ್ ಕೆ.ವಿ.

ಸುಳ್ಯ ತಾಲೂಕು ರಚನೆಗೊಂಡು 60 ವರ್ಷ ತುಂಬಿದ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆಯು ಇಂದು ನಡೆದಿದ್ದು, ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾವಿರಾರು ಮಂದಿಯ ಕೂಡುವಿಕೆಯೊಂದಿಗೆ ಬೃಹತ್ ಮೆರವಣಿಗೆ ಸುಳ್ಯ ನಗರದಲ್ಲಿ ನಡೆಯಿತು.
ಮೆರವಣಿಗೆಯ ಆರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.

“ಸುಳ್ಯ ತಾಲೂಕು ರಚನೆ ಆಗುವಲ್ಲಿ ನಮ್ಮ ತಂದೆಯವರು ಮುಂಚೂಣಿಯಲ್ಲಿದ್ದವರು. ಜತೆಗೆ ಹಲವು ಹಿರಿಯರು ಕೂಡಾ ಶ್ರಮಿಸಿದ್ದಾರೆ. ಆ ಎಲ್ಲ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬೇಕು. ಸುಳ್ಯ ತಾಲೂಕು ರಚನೆ ಆದುದರಿಂದ ಸುಳ್ಯ ಅಭಿವೃದ್ಧಿ ಯಾಗುತ್ತಾ ಬಂದಿದೆ.
ತಾಲೂಕಿಗೆ 60ರ ಈ ಸಮಯದಲ್ಲಿ ದೊಡ್ಡ ಯೋಜನೆಯೊಂದು ಸುಳ್ಯಕ್ಕೆ ಬಂದು ಸಾವಿರದಷ್ಟು ಮಂದಿಗೆ ಉಧ್ಯೋಗ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಪ್ರಯತ್ನ ಪಡಬೇಕು” ಎಂದು ಡಾ.ಆರ್.ಪಿ ಹೇಳಿದರು.
ಷಷ್ಟ್ಯಬ್ಧ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಸುಳ್ಯ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ತೆಂಗಿನಕಾಯಿ ಒಡೆದರು.

ಷಷ್ಟ್ಯಬ್ಧ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಎನ್.ಮನ್ಮಥ, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಜಾಕೆ ಸಂತೋಷ್, ಸಂಪಾದಕರಾದ ಕೆ.ಆರ್.ಗಂಗಾಧರ್, ಸಂಚಾಲಕರುಗಳಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ಸಹ ಸಂಚಾಲಕರುಗಳಾದ ಸಂತೋಷ್ ಕುತ್ತಮೊಟ್ಟೆ, ಡಾ.ನಿತೀನ್ ಪ್ರಭು, ಉಪಾಧ್ಯಕ್ಷರುಗಳಾದ ಟಿ.ಎಂ.ಶಹೀದ್, ಸದಾನಂದ ಮಾವಜಿ,ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ತಹಶೀಲ್ದಾರ್ ಮಂಜುಳಾ, ತಾಲೂಕು ಪಂಚಾಯತ್ ಇ.ಒ. ರಾಜಣ್ಣ, ಪಿ.ಸಿ.ಜಯರಾಮ್, ಜಾನ್ ವಿಲಿಯಂ ಲಸ್ರಾದೋ, ಕಾರ್ಯದರ್ಶಿಗಳಾದ ದಿನೇಶ್ ಮಡಪ್ಪಾಡಿ, ಪಿ.ಎಸ್.ಗಂಗಾಧರ್, ಸಂಘಟನಾ ಕಾರ್ಯದರ್ಶಿಗಳಾದ ವೆಂಕಟ್ ದಂಬೆಕೋಡಿ, ಸೇರಿದಂತೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು – ಸದಸ್ಯರುಗಳು, ಕೆ.ವಿ.ಜಿ. ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗಿಯಾದರು.

ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕೇರಳದ “ಶಿಂಗಾರಿ ಮೇ” ಚೆಂಡೆ, 60ರ ನೆನಪಿಗಾಗಿ ಟ್ಯಾಬ್ಲೋ, ಗೊಂಬೆಗಳ ಕುಣಿತ ಮೆರವಣಿಗೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

