ಸುಳ್ಯ ನಗರದಲ್ಲಿ ನಗರ ಪಂಚಾಯತ್ ಅಧಿಕಾರಿಗಳಿಂದ ವ್ಯಾಪಾರ ಮಳಿಗೆಗಳಿಗೆ ಭೇಟಿ

ಏಕಬಳಕೆ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ನಿಷೇದಿತ ಏಕ ಬಳಕೆ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಕುರುಂಜಿ ಭಾಗ್, ದೇವಸ್ಥಾನ ವಠಾರ,ಮುಖ್ಯ ರಸ್ತೆ ವಠಾರದ ವಿವಿಧ ಹೋಟೆಲ್,ಅಂಗಡಿ ಇತ್ಯಾದಿ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ದಾಳಿ ನಡೆಸಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಪರಿಶೀಲಿಸಿ ಸುಮಾರು 15 ಕೆ ಜಿಯಷ್ಟು ಪ್ಲಾಸ್ಟಿಕ್ ಅನ್ನು ವಶಪಡಿಸಿ ಕಚೇರಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಅಂಗಡಿ ಮಾಲಕರುಗಳಿಗೆ ಮಾಹಿತಿ ನೀಡಿದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್ ರವರು ಸರಕಾರ ನಿಷೇದಿತ ಏಕಬಳಕೆ ಪ್ಲಾಸ್ಟಿಕ್ ಯಾವುದೇ ವ್ಯಾಪಾರಿ ಮಳಿಗೆಯವರು ಕಡ್ಡಾಯವಾಗಿ ಬಳಸದೆ ಸರಕಾರದ ಸೂಚನೆಯನ್ನು ಪಾಲಿಸಿ ಪಂಚಾಯತ್ ನೊಂದಿಗೆ ಸಹಕರಿಸುವಂತೆ ಸೂಚನೆ ನೀಡಿದ್ದಾರೆ. ಮುಂದಿನ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಸಾಮಾಗ್ರಿಗಳನ್ನು ಸೀಝ್ ಮಾಡುವುದರ ಜೊತೆಗೆ ದಂಡ ವಿಧಿಸಲಾಗುವುದು ಎಂದೂ ಎಚ್ಚರಿಕೆಯನ್ನು ನೀಡಿದ್ದಾರೆ.

ದಾಳಿ ಸಂದರ್ಭದಲ್ಲಿ ಮುಖ್ಯಾಧಿಕಾರಿಯವರ ಜೊತೆಗೆ ಪಟ್ಟಣ ಪಂಚಾಯತ್ ನ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ, ಕರ ವಸೂಲಿಗಾರ ಮಜೀದ್, ಸ್ವಚ್ಛತಾ ಮೇಲ್ವಿಚಾರಕರಾದ ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *