ಫೆ.1. ಸಂಪಾಜೆಯಲ್ಲಿ ಕ್ರೈಸ್ತ ಸಂಘಟನೆಯ ವತಿಯಿಂದ ನಡೆದ ವಾರ್ಷಿಕ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮ
ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ಫೆಬ್ರವರಿ ಒಂದರಂದು ಸರ್ವಕ್ರೈಸ್ತ ಸಮುದಾಯ ಸಂಘದ ವಾರ್ಷಿಕ ಸಮಾವೇಶ ಅಧ್ಯಕ್ಷರಾದ ಶ್ರೀ ಸಂತೋಷ್ ಕ್ರಾಸ್ತ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಇವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿದಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜ ನಿವೃತ್ತ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.
ಇದೇ ವೇದಿಕೆಯಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿಯವರು, ಮತ್ತು ಸಂಘಟನೆ ವತಿಯಿಂದ ಸಮುದಾಯದ ನಾಯಕರಾದ ಐವನ್ ಡಿಸೋಜ ಹಾಗೂ ಜಾನಿ.ಕೆ.ಪಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು ಮತ್ತು ಬಿಷಪ್ ಅವರ ಬಾಲ್ಯದ ಗೆಳೆಯ ಹಾಗೂ ಸಹಪಾಠಿಯಾಗಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶ್ರೀ ಗಂಗಾದರ್ ಮಾಸ್ಟರ್ ಅವರನ್ನೂ ಬಿಷಪ್ ಹಾಗೂ ಸಂಘಟನೆ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಶ್ರೀ ಕೆ.ಆರ್.ಗಂಗಾದರ ಮಾಸ್ಟರ್ ಬಿಷಪ್ ಅವರ ಬಗ್ಗೆ ಅಭಿನಂದನಾ ಭಾಷಣವನ್ನು ಮಾಡಿದರು.

ಜಾನಿ.ಕೆ.ಪಿ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಸಂಘಟನೆಯ ವಾರ್ಷಿಕ ವರದಿಯನ್ನು ಸಂಘದ ಕಾನೂನು ಸಲಹೆಗಾರರಾದ ಅಡ್ವೋಕೇಟ್ ಡೊಮಿನಿಕ್ ಅವರು ವಾಚಿಸಿದರು.

ಒಂದು ವರ್ಷದ ಆಯವ್ಯಯವನ್ನು ಕೋಶಾಧಿಕಾರಿ ಕುರಿಯಾಕೋಸ್ ಅವರು ಮಂಡಿಸಿದರು.
ಸ್ವಾಗತ ಹಾಗೂ ಕಾರ್ಯಕ್ರಮ ನಿರೂಪಣೆ ಲೂಕಾಸ್ ಟಿ.ಐ ನಿರ್ವಹಿಸಿದರು, ವಂದನಾರ್ಪಣೆಯನ್ನು ಟೀಚರ್ ಮೋಳಿಕುಟ್ಟಿ ನೆರವೇರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಮುದಾಯದ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು. ಸಭೆಯ ವೇದಿಕೆಯಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಧರ್ಮಗುರುಗಳಾದ ರೆ.ಫಾ ಫೌಲ್.ಕ್ರಾಸ್ತ ಉಪಸ್ತಿತರಿದ್ದು ಶುಭಹಾರೈಸಿದರು.

ಸಂಪಾಜೆ ಹೋಲಿ ಟ್ರಿನಿಟಿ ಚರ್ಚಿನ ಧರ್ಮಗುರುಗಳಾದ ರೆ.ಫಾ. ಮನೋಜ್ ಪುತ್ತನ್ ಪುರಕ್ಯಲ್, ಕಲ್ಲುಗುಂಡಿಯ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಅನಿತಾ ಫರ್ನಾಂಡೀಸ್, ಕಲ್ಲುಗುಂಡಿ ಕ್ರಿಶ್ಚಿಯನ್ ಬ್ರದರನ್ ಅಸೆಂಬ್ಲಿಯ ಸಭಾಹಿರಿಯರಾದ ಶ್ರೀ ಕುಂಞುಮೋನ್ ,ಕಲ್ಲುಗುಂಡಿ ಹೆಬ್ರೋನ್ ಬ್ರದರನ್ ಅಸೆಂಬ್ಲಿಯ ಸಭಾಹಿರಿಯರಾದ ಶ್ರೀ ಸಭಾಸ್ಟಿಯನ್ ನೆಲ್ಲಿಕುಮೇರಿ, ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಉಪಾಧ್ಯಕ್ಷರಾದ ಶ್ರೀ ಲ್ಯಾನ್ಸಿ ಡಿಸೋಜ, ಹೋಲಿ ಟ್ರಿನಿಟಿ ಚರ್ಚ್ ಸಂಪಾಜೆಯ ಉಪಾಧ್ಯಕ್ಷರಾದ ಶ್ರೀ ಜೋಯಿಜೋಸೆಫ್ ಉಪಸ್ಥಿತರಿದ್ದರು.

ಹಾಗೇ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ.ವಕ್ತಾರ ಶವಾದ್ ಗೂನಡ್ಕ, ಗೂನಡ್ಕದ ಬದ್ರಿಯಾ ಜುಮಾಮಸೀದಿಯ ಅಧ್ಯಕ್ಷರಾದ ಶ್ರೀ ಮಹಮ್ಮದ್ ಕುಂಞಿಗೂನಡ್ಕ, ತೊಡಿಕಾನ ದೇವಸ್ಥಾನದ ಆಢಳಿತ ಸಮಿತಿಯ ನಿರ್ದೇಶಕರಾದ ಶ್ರೀ ವಸಂತ ಪೆಲ್ತಡ್ಕ, ಕಲ್ಲುಗುಂಡಿ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಗದೀಶ್ ರೈ ನೆಲ್ಲಿಕುಮೇರಿ ಮತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜ್ಞಾನಶೀಲನ್ ರಾಜು, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿಯಾದ ಶ್ರೀಮತಿ ಪ್ರಮಿಳಾ ಪೆಲ್ತಡ್ಕ, ನಾಗಮುತ್ತು ನೆಲ್ಲಿಕುಮೇರಿ ಇವರು ಉಪಸ್ಥಿತರಿದ್ದರು.

