ಕೇರಳ ಸ್ಥಳೀಯ ಸಂಸ್ಥೆ ಅಡಳಿತ ಕ್ಕಾಗಿ ನಡೆದ ಚುನಾವಣೆ. ಬಿರುಸಿನಿಂದ ನಡೆಯುತ್ತಿರುವ ಮತ ಎಣಿಕೆ ಕಾರ್ಯ ಪಲಿತಾಂಶಕ್ಕಾಗಿ ಕುತೂಹಲದಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸ್ಪರ್ಧಾಳುಗಳು.
ಡಿಸೆಂಬರ್ 9 ಮತ್ತು 11 ದಿನಾಂಕಗಳಲ್ಲಿ ಎರಡು ಹಂತವಾಗಿ ನಡೆದಿದ್ದು. ಇಲ್ಲಿ ಎಲ್ ಡಿ ಎಫ್ ಹೆಸರಿನಲ್ಲಿ ಎಡಪಕ್ಷದ ನೇತೃತ್ವದಲ್ಲಿನ ಸಂಯುಕ್ತ ರಂಗ ಮತ್ತು ಯುಡಿಎಫ್ ಹೆಸರಿನಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ ಹಾಗೂ ಎನ್ ಡಿ ಎ ಹೆಸರಿನಲ್ಲಿ ಬಿಜೆಪಿ ನೇತೃತ್ವದ ಸಂಯುಕ್ತ ರಂಗ ಕಣದಲ್ಲಿದೆ. 6 ಕಾರ್ಪೊರೇಷನ್, 86 ಮುನಿಸಿಪಾಲಿಟಿ, 14 ಜಿಲ್ಲಾಪಂಚಾಯತ್ 152 ಬ್ಲಾಕ್ ಪಂಚಾಯತ್ 941 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿದ್ದು ಇದೀಗ ಮತೆಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

2026 ರಲ್ಲಿ ಕೇರಳದಲ್ಲಿ ವಿದಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಈ ಸ್ಥಳೀಯಾಡಳಿತಕ್ಕಾಗಿ ನಡೆದ ಚುನಾವಣೆಯ ಫಲಿತಾಂಶ ಮುಂದಿನ ವಿದಾನ ಸಭಾ ಚುನಾವಣೆಗಾಗಿನ ಸೆಮಿಫೈನಲ್ ಎನ್ನಲಾಗುತ್ತಿದೆ. ಇದೀಗ ನಡೆಯುತ್ತಿರುವ ಮತೆಣಿಕೆಯ ಫಲಿತಾಂಶದಲ್ಲಿ ಹಾವು ಏಣಿ ಆಟ ಮುಂದುವರಿಯುತ್ತಿದ್ದು, ಮದ್ಯಾಹ್ನದ ಹೊತ್ತಿಗೆ ಇಡೀ ರಾಜ್ಯದ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ ಎಂದು ನಿರೀಕ್ಷೆಯಿದೆ.
ಇತಿಹಾಸದಲ್ಲಿ ಪ್ರಥಮ ಬಾರಿಗೆ ನಿರಂತರ ಎರಡನೇ ಬಾರಿ ಆಡಳಿತ ಮಾಡಿದ ಪಕ್ಷ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರಕ್ಕೆ ಈ ಚುನಾವಣಾ ಫಲಿತಾಂಶ ಜನಾಭಿಪ್ರಾಯದ ಮುನ್ಸೂಚನೆಯಂತೂ ಹೌದು ಎನ್ನಲಾಗುತ್ತಿದೆ, ಯಾವುದಕ್ಕೂ ಸ್ಪಷ್ಟ ಪಲಿತಾಂಶಕ್ಕಾಗಿ ಮತೆಣಿಕೆ ಸಂಪೂರ್ಣ ಆಗುವವರೆಗೂ ಕಾದುನೋಡಬೇಕಿದೆ.
