ಬಾಂಗ್ಲಾ ಆಟಗಾರರನ್ನು ಐಪಿಎಲ್ನಿಂದ ಬ್ಯಾನ್ ಮಾಡಿ! ಭಾರೀ ವಿರೋಧಗಳ ನಂತರ ಬಿಸಿಸಿಐ ಸ್ಪಷ್ಟನೆ
ನವದೆಹಲಿ: ಕಳೆದ ಕೆಲವು ಸಮಯಗಳಿಂದ ಬಾಂಗ್ಲಾದೇಶದಲ್ಲಿ ಹಿಂದುಗಳು ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಿರಂತರವಾಗಿ ದಾಳಿಗಳಾಗುತ್ತಿರುವುದು ಬಹುತೇಕರಿಗೆ ಗೊತ್ತಿರುವ ಸಂಗತಿ.ಇದರಲ್ಲೂ ಇದೀಗ ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಇದಕ್ಕೆ ಇತ್ತೀಚಿನ ಘಟನೆ ಕೂಡ ಒಂದು ಬಲವಾದ ಸಾಕ್ಷಿ.

ಬಾಂಗ್ಲಾದಲ್ಲಿ ಭಾರತ ವಿರೋಧಿ ಚುಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಇಂಥಾ ಸಮಯದಲ್ಲಿ ಬಾಂಗ್ಲಾ ಆಟಗಾರರನ್ನು ನಮ್ಮದೇ ಆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಅವಕಾಶ ನೀಡುವುದು ಕಿಂಚಿತ್ತು ಸರಿಯಲ್ಲ ಎಂಬ ಕೂಗು ಒಂದು ಕೆಲವರಿಂದ ಕೇಳಿಬಂದಿವೆ.
ಬಾಂಗ್ಲಾ ಆಟಗಾರನಾದ ಮುಸ್ತಾಫಿಜುರ್ ರೆಹಮಾನ್ ಸೇರಿ ಒಂದಷ್ಟು ಕ್ರಿಕೆಟಿಗರನ್ನು ಐಪಿಎಲ್ನಿಂದ ಕೈಬಿಡಿ ಎಂಬ ಕೂಗು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಇನ್ನು ಕೋಲ್ಕತ ನೈಟ್ ರೈಡರ್ಸ್ (KKR) ತಂಡದ ಮಾಲೀಕ ಹಾಗೂ ನಟ ಶಾರುಖ್ ಖಾನ್ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದುಗಳ ಕೊಲೆ ಆಗುತ್ತಿರುವಾಗ, ಅಲ್ಲಿನ ಕ್ರಿಕೆಟಿಗರನ್ನು ಇಲ್ಲಿ ಆಡಿಸುವುದು ಎಷ್ಟು ಸರಿ? ಇದೆಲ್ಲ ಇಲ್ಲಿಗೆ ಅಂತ್ಯಗೊಳ್ಳಬೇಕು ಎಂದು ಕೆಲವು ನೆಟ್ಟಿಗರು ಕೆಂಡಾಮಂಡಲಗೊಂಡಿದ್ದಾರೆ.
ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಡಿಸೆಂಬರ್ 16ರಂದು ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ KKR ಫ್ರಾಂಚೈಸಿ ಖರೀದಿ ಮಾಡಿದೆ. ಇದನ್ನು ಉಲ್ಲೇಖಿಸಿ ಆಕ್ರೋಶ ಹೊರಹಾಕಿರುವ ಉತ್ತರ ಪ್ರದೇಶದ ವಿಧಾನಸಭೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಸಂಗೀತ್ ಸೋಮ್, ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.
ಈ ಮಧ್ಯೆ ನೆಟ್ಟಿಗರಲ್ಲಿ ಕೆಲವರು ಐಪಿಎಲ್ ವಿಷಯದಲ್ಲಿ ಪ್ರದಾನಿ ಮೋದಿ ಮತ್ತು ಅಮಿತ್ ಶಾ ತೀರ್ಮಾನ ತೆಗೆದುಕೊಂಡರೆ ಅದನ್ನು ಯಾರಾದರೂ ವಿರೋಧಿಸಲು ಸಾದ್ಯವೇ ಸುಖಾಸುಮ್ಮನೆ ಶಾರೂಖ್ ಖಾನ್ ಮೇಲೆ ಮತ್ತು ಪ್ರಾಂಚೈಸಿಗಳನ್ನು ಬೊಟ್ಟುಮಾಡೋದು ನಿಲ್ಲಿಸಿ ಈ ಗೊಂದಲಗಳ ನಿವಾರಣೆ ಕೇಂದ್ರ ಸರಕಾರದ ಕೈಯಲ್ಲಿ ಇದೆ ಎಂದಿರೋದು ಒಂದು ಕಡೆ ಬಿಜೆಪಿ ನಾಯಕರಿಗೆ ಮರುಪ್ರಶ್ನೆ ಎಸೆದಂತೆಯೂ ಆಗಿದೆ.

ಬಿಸಿಸಿಐ ಪ್ರತಿಕ್ರಿಯೆ
ಈ ಪರಿಸ್ಥಿತಿಯಲ್ಲಿ, ಬಾಂಗ್ಲಾ ಆಟಗಾರರನ್ನು ಐಪಿಎಲ್‌ನಲ್ಲಿ ಆಡದಂತೆ ನಿಷೇಧಿಸಬೇಕೆಂಬ ಬೇಡಿಕೆಗಳು ತೀವ್ರವಾದ ಹಿನ್ನೆಲೆ ಬಿಸಿಸಿಐ ಈ ವಿಚಾರಕ್ಕೆ ಕಡೆಗೂ ಪ್ರತಿಕ್ರಿಯಿಸಿದೆ. “ಇದುವರೆಗೆ ಬಾಂಗ್ಲಾದೇಶಿ ಆಟಗಾರರನ್ನು ಐಪಿಎಲ್‌ನಲ್ಲಿ ಭಾಗವಹಿಸದಂತೆ ನಿಷೇಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರದಿಂದ ನಮಗೆ ಬಂದಿಲ್ಲ. ಇಂಥಾ ವಿಷಯದಲ್ಲಿ ನಾವು ತೊಡಗಬಾರದು ಎಂಬುದು ನಮ್ಮ ಕೈಯಲ್ಲಿಲ್ಲ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಕಷ್ಟಸಾಧ್ಯ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

