ಯುವಕರ ತೊಡಗಿಸಿಕೊಳ್ಳುವಿಕೆಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಿಷ್ಟಗೊಳಿಸುವ ಕೆಲಸ ನಡೆಸಲಾಗುತ್ತಿದೆ. ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್

ವದೆಹಲಿ: 10-20 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಹೊಂದಿದ್ದ ಮತ ಬ್ಯಾಂಕ್ ಈಗ ಇಲ್ಲ ಎಂದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಯುವಕರ ತೊಡಗಿಸಿಕೊಳ್ಳುವಿಕೆಗೆ ಅವಕಾಶ ಮಾಡಿಕೊಡುತ್ತಾ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಿಷ್ಟಗೊಳಿಸುವ ಕೆಲಸ ನಡೆಸಲಾಗುತ್ತಿದೆ ಎಂದರು ಅವರು ಎಬಿಪಿ ನ್ಯೂಸ್ ನಡೆಸಿದ ಯೂತ್ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡುತ್ತಾ ನನ್ನ ಪಕ್ಷವನ್ನು ಮತ್ತಷ್ಟು ಬಲಪಡಿಸಲು ನಾನು ಬಯಸುತ್ತೇನೆ ಮತ್ತು ನಾವು ಯುವಕರನ್ನು ತೊಡಗಿಸಿಕೊಂಡು ಪಕ್ಷವನ್ನು ಬಲಪಡಿಸುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಹೊಸ ಬಿಜೆಪಿ ಅಧ್ಯಕ್ಷರಿಗೆ ಅಭಿನಂದನೆಗಳು ಎಂದು ಹೇಳುತ್ತಲೇ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ನಮ್ಮ ಅಧ್ಯಕ್ಷರು ಹಲವು ವರ್ಷಗಳಿಂದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಶಶಿ ತರೂರ್ ಅವರು ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಿದರು. ಆದರೆ ಬಿಜೆಪಿಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಲ್ಲ. ಬಿಜೆಪಿಯ ಒಳಗೆ ಪ್ರಜಾಪ್ರಭುತ್ವ ಇಲ್ಲ ಎಂದು ಹೇಳಿದರು.

ಈಗ ಯಾರಾದರೂ ವಿರೋಧ ಪಕ್ಷವನ್ನು ಹತ್ತಿಕ್ಕಲು, ದಮನ ಮಾಡಲು ಅಥವಾ ಜೈಲಿಗೆ ಹಾಕಲು ಪ್ರಯತ್ನಿಸಿದರೆ, ಅದು ಅದು ಅವರ ಪಕ್ಷವನ್ನು ಬಲಪಡಿಸುತ್ತದೆಯೇ ? ಇದೀಗ ಸಂಘವು ಪರದೆಯ ಹಿಂದಿನಿಂದ ಎಲ್ಲವನ್ನೂ ನಿಯಂತ್ರಿಸುತ್ತದೆ ಎಂದು ಸಚಿನ್ ಪೈಲಟ್ ಹೇಳಿದರು.

‘ರಾಹುಲ್ ಗಾಂಧಿಯವರನ್ನು ಎಲ್ಲರ ಒಪ್ಪಿಗೆಯೊಂದಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ ಎಂದ ಸಚಿನ್ ಪೈಲಟ್, ಎಸ್‌ಐಆರ್‌ಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ಡೇಟಾವನ್ನು ಇನ್ನೂ ಚುನಾವಣಾ ಆಯೋಗ ಪರಿಶೀಲಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದರು.

Leave a Reply

Your email address will not be published. Required fields are marked *