ಫೆ.1 ರಂದು ಸಂಪಾಜೆಯಲ್ಲಿ ವಿಶ್ರಾಂತ ಬಿಷಪ್ ಲಾರೆನ್ಸ್ ಮುಕ್ಕುಯಿಯವರಿಗೆ ಸನ್ಮಾನ ಹಾಗೂ ಸರ್ವ ಕ್ರೈಸ್ತ ಸಮುದಾಯದ ವಾರ್ಷಿಕ ಸಮ್ಮೇಳನ ಕಾರ್ಯಕ್ರಮ. ವಿವಿಧ ಗಣ್ಯರ ಉಪಸ್ಥಿತಿ.
ಪ್ರಜಾವಾರ್ತೆ:
ಸಂಪಾಜೆ: ಫೆಬ್ರವರಿ 1 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ಸರ್ವ ಕ್ರೈಸ್ತ ಸಮುದಾಯ ಸಂಘ (ರಿ) ಇದರ ವತಿಯಿಂದ ವಾರ್ಷಿಕ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿರುತ್ತದೆ.

ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನವರಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿರುವುದಾಗಿ ಸಂಘಟಕರು ತಿಳಿಸಿರುತ್ತಾರೆ.

ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜ, ರಾಷ್ಟ್ರಪ್ರಶಸ್ತಿ ವಿಜೇತ ಅಧ್ಯಾಪಕರಾದ ಶ್ರೀ ಕೆ.ಆರ್.ಗಂಗಾಧರ್ ಮಾಸ್ಟರ್ ಅರಂತೋಡು, ಕರ್ನಾಟಕ ಸರಕಾರದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ದೇಶಕರಾದ ಶ್ರೀ ಜಾನಿ. ಕೆ.ಪಿ ಮತ್ತು ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಕಲ್ಲುಗುಂಡಿ ಇದರ ಧರ್ಮ ಗುರುಗಳಾದ ರೆ.ಫಾ, ಪೌಲ್ ಕ್ರಾಸ್ತ, ಹೋಲಿ ಟ್ರಿನಿಟಿ ಚರ್ಚ್ ಸಂಪಾಜೆ ಇದರ ಧರ್ಮ ಗುರುಗಳಾದ ರೆ.ಫಾ.ಮನೋಜ್ ಪುತ್ತನ್ ಪುರಕ್ಯಲ್, ಸಿಸ್ಟರ್ ಅನಿತಾ ಫರ್ನಾಂಡೀಸ್,
ಸರ್ವಕ್ರೈಸ್ತ ಸಮುದಾಯ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಕ್ರಾಸ್ತ, ಕ್ರಿಶ್ಚಿಯನ್ ಬ್ರದರೆನ್ ಅಸೆಂಬ್ಲಿ ಕಲ್ಲುಗುಂಡಿ ಸಭಾಹಿರಿಯರಾದ ಶ್ರೀ ಕುಂಜ್ಞುಮೋನ್, ಸೆಬಾಸ್ಟಿಯನ್ ನೆಲ್ಲಿಕುಮೇರಿ, ಸಂತಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನ ಉಪಾಧ್ಯಕ್ಷರಾದ ಶ್ರೀ ಲ್ಯಾನ್ಸಿ ಡಿಸೋಜ, ಹೋಲಿ ಟ್ರಿನಿಟಿ ಚರ್ಚ್ ಇದರ ಉಪಾಧ್ಯಕ್ಷರಾದ ಶ್ರೀ ಜೋಯಿ ಜೋಸೆಫ್ ಉಪಸ್ಥಿತರಿರಲಿದ್ದಾರೆ ಮತ್ತು
ಕಳೆದ ಒಂದು ವರ್ಷಗಳಲ್ಲಿ ನಡೆಸಲಾದ ಚಾರಿಟಿ (ದಾನ) ಕಾರ್ಯಗಳ ಬಗೆಗಿನ ವರದಿ ಮಂಡಿಸಲಾಗುವುದು ಎಂದು ತಿಳಿಸಲಾಗಿದೆ.

