SIR ಗೆ – SSLC ಪ್ರವೇಶ ಪತ್ರವೂ ಅಸಿಂಧುವೇ !? SIR ಬಗ್ಗೆ ಅಂಕಣಕಾರ ಶಿವಸುಂದರ್ ಅವರ ಬರಹ.

SIR ಸುದ್ದಿ – SSLC ಪ್ರವೇಶ ಪತ್ರವೂ ಅಸಿಂಧುವಂತೆ!.
ಬಡ ಭಾರತೀಯರ ಪೌರತ್ವವನ್ನು ರದ್ದು ಪಡಿಸಲು ಬಡ ಭಾರತೀಯರ ಮೇಲೆ ರಕ್ತ ರಹಿತ ಯುದ್ಧವನ್ನೇ ನಡೆಸಿರುವ ಕೇಂದ್ರ ದ ಚುನಾವಣಾ ಆಯೋಗ…

ಈಗ ಪ. ಬಂಗಾಳದಲ್ಲಿ ಬಡವರ ಮೇಲೆ ಮತ್ತೊಂದು ದಾಖಲಾಸ್ತ್ರವನ್ನು ಪ್ರಯೋಗಿಸಿದೆ…

ಭಾರತದಲ್ಲೇ ಜನಿಸಿದ್ದಕ್ಕೆ ಇದ್ದಿದ್ದರಲ್ಲಿ ಸುಲಭವಾಗಿ ಸಿಗಬಹುದಾದ ದಾಖಲೆಯಾಗಿದ್ದ SSLC ಪ್ರವೇಶ ಪ್ರಮಾಣ ಪತ್ರವನ್ನು ಕೂಡ ಒಂದು ಪೌರತ್ವ ದಾಖಲೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಚುನಾವಣ ಆಯೋಗ ನಿನ್ನೆ ಜನವರಿ 15) ಆದೇಶ ಹೊರಡಿಸಿದೆ…

(ಆದೇಶ ಅಡಕದಲ್ಲಿದೆ)

ವಿಷಯ ಸ್ಪಷ್ಟವಾಗಿದೆ : SIR ಉದ್ದೇಶ ಅನರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವುದಲ್ಲ…ಬಡ ಭಾರತೀಯರು ಮತ್ತು ಅಲ್ಪಸಂಖ್ಯಾತರ ಬಳಿ ಇರಬಹುದಾದ ಮತ್ತು ಕೊಡಬಹುದಾದ ದಾಖಲೆಗಳನ್ನು ಅಸಿಂಧುವೆಂದು ಘೋಷಿಸಿ ಅವರೆಲ್ಲರಿಗೂ ಪೌರತ್ವ ನಿರಾಕರಿಸುವುದು…

SIR ಎಂದರೆ ಭಾರತದ ಮೇಲೆ, ಸಂವಿಧಾನದ ಮೇಲೆ ಮೋದಿ ಸರ್ಕಾರ ಹಾಕಿರುವ FIR…
ಇದರೊಳಗೆ ಬದುಕುಳಿವ ಮಾರ್ಗವಿಲ್ಲ.
SIR ನ ಸಾರಾ ಸಗಟು ರದ್ದಿಗೆ ಹೋರಾಡುವುದೊಂದೇ ಏಕೈಕ ದಾರಿ. ಎಂದು ಖ್ಯಾತ ಅಂಕಣಕಾರ ಶಿವಸುಂದರ್ ತಮ್ಮ ಮೊನಚು ಬರಹದ ಮೂಲಕ ಹೇಳಿದರು.

Leave a Reply

Your email address will not be published. Required fields are marked *