ಡಿಜಿಟಲ್ ಇ-ಸ್ಟಾಂಪ್ ಪೇಪರ್ ವ್ಯವಸ್ಥೆಯ ಮಾಹಿತಿ ಕಾರ್ಯಗಾರ
ಪ್ರಜಾವಾರ್ತೆ:
ಸುಳ್ಯ; ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇ-ಸ್ಟಾಂಪ್ ಪೇಪರ್ ವ್ಯವಸ್ಥೆಯ ಮಾಹಿತಿ ಕಾರ್ಯಗಾರವು ಜ. 9 ರಂದು ಸುಳ್ಯ ತಾಲೂಕು ಕಛೇರಿಯ ಮುಂಭಾಗ ಶೀತಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಜಿಲ್ಲಾ ನೋಂದಣಾಧಿಕಾರಿ ಹೇಮ ಗಿರೀಶ್ ರವರು ವಹಿಸಿಕೊಂಡು ಇ ಸ್ಟ್ಯಾಂಪ್ ಪೇಪರ್ ಮಹತ್ವವನ್ನು ಜನಸ್ನೇಹಿಯಾಗಿ ಒದಗಿಸುವ ಬಗ್ಗೆ ಮಾಹಿತಿ ನೀಡಿದರು.
ನಂತರ ವಿದ್ಯುನ್ಮಾನ ಪ್ರೋಜೆಕ್ಟರ್ ಬಳಕೆಯ ಮೂಲಕ ಸಾರ್ವಜನಿಕರಿಗೂ ತೋರಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ದಸ್ತಾವೇಜು ಬರಹಗಾರರು, ವಕೀಲರು, ಇಸ್ಟಾಂಪ್ ಪೇಪರ್ ಮಾರಾಟಗಾರರು,ಕರ್ನಾಟಕ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ,ಸಹಕಾರಿ ಸಂಘಗಳ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ತರಬೇತಿ ಪಡೆದುಕೊಂಡರು.
ಸುಳ್ಯ ಉಪನೋಂದಣಾಧಿಕಾರಿ ಸತ್ಯೇಶ್ ಪಿ. ರವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು.

