SIR: 9 ರಾಜ್ಯಗಳು, ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ ಸುಮಾರು 6.5 ಕೋಟಿ ಮತದಾರರ ಹೆಸರು ಮಾಯ!

ನವದೆಹಲಿ: 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಡಿ (SIR) ಪ್ರಕಟಿಸಿದ ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 6.5 ಕೋಟಿ ಮತದಾರರ ಹೆಸರು ಮಾಯವಾಗಿರೋದು ಇದೀಗ ಬೆಳಕಿಗೆ ಬಂದಿದೆ.

ಅಗಸ್ಟ್ ಕೊನೆಯ ವಾರದಲ್ಲಿ ಆರಂಭ ಗೊಂಡಿದ್ದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯ (SIR) ನ ಎರಡನೇ ಹಂತದ ಮೊದಲು ಈ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು 50.90 ಕೋಟಿ ಮತದಾರರನ್ನು ಹೊಂದಿದ್ದವು. ಪ್ರತ್ಯೇಕ ಕರಡು ಮತದಾರರ ಪಟ್ಟಿಗಳ ಪರಿಷ್ಕರಣೆಯ ಬಳಿಕ ಇದೀಗ ಮತದಾರರ ಸಂಖ್ಯೆ 44.40 ಇಳಿದಿರುತ್ತದೆ.

ಕರಡು ಮತದಾರರ ಪಟ್ಟಿಗಳಿಂದ ತೆಗೆದುಹಾಕಲಾಗಿರುವ ಮತದಾರರ ಹೆಸರುಗಳನ್ನು ‘ಎಎಸ್‌ಡಿ’ ಅಥವಾ ಗೈರು, ಸ್ಥಳಾಂತರಿತ ಮತ್ತು ಮೃತರು/ಬಹು ನಮೂದುಗಳ ವರ್ಗಕ್ಕೆ ಸೇರಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿರುತ್ತಾರೆ.

SIR ಪ್ರಕ್ರಿಯೆಯ ಬಳಿಕ ಉತ್ತರಪ್ರದೇಶದ ಕರಡು ಮತದಾರರ ಪಟ್ಟಿಯಿಂದ 2.89. ಕೋಟಿ ಮತದಾರರ ಹೆಸರುಗಳು ತೆಗೆದು ಹಾಕಲಾದ ಮಾಹಿತಿ ಹೊರಬಿದ್ದಿತ್ತು. ಇದೀಗ ಉತ್ತರಪ್ರದೇಶದಲ್ಲಿ 12.55 ಕೋಟಿ ಮತದಾರರು ಉಳಿದುಕೊಂಡಿದ್ದಾರೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *