ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ವಿದಾನಪರಿಷತ್ ಶಾಸಕ ಐವನ್ ಡಿಸೋಜರವರ ಪ್ರಯತ್ನದಿಂದ ಬಿಡುಗಡೆಯಾದ ಅನುದಾನಗಳ ಕಾಮಗಾರಿಗಳ ಪ್ರಾರಂಭ.

ಜ.7 ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕೆ.ಪಿ.ಸಿ.ಸಿ ವಕ್ತಾರರಾದ ಶವಾದ್ ಗೂನಡ್ಕರವರ ಬೇಡಿಕೆಯಂತೆ , ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಐವನ್ ಡಿ’ಸೋಜರವರ ಮುಖಾಂತರ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ಗೂನಡ್ಕ ಭಾಗದ ರಸ್ತೆಗಳ ಕಾಂಕ್ರೀಟಿಕರಣಕ್ಕೆ 40 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು ಇದರ ಕಾಮಗಾರಿ ಪ್ರಾರಂಭಗೊಂಡಿರುತ್ತದೆ.

ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಐವನ್ ಡಿ’ಸೋಜರವರು ತಮ್ಮ ಶಿಫಾರಸ್ಸಿನ ಮೂಲಕ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಂಪಾಜೆ ಗ್ರಾಮದ ಗೂನಡ್ಕ–ದರ್ಖಾಸ್ತು–ಕೊಪ್ಪದಕಜೆ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂ.ಗಳು ಹಾಗೂ ಪೇರಡ್ಕ – ಪೆರುಂಗೋಡಿ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂ.ಗಳು ಸೇರಿದಂತೆ ಒಟ್ಟು 40 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸಿ, ಇಂದು ದರ್ಖಾಸ್ತು ಮುಖ್ಯ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕರವರ ನೇತೃತ್ವದಲ್ಲಿ ಚಾಲನೆ ಮಾಡುವ ಮೂಲಕ ಎರಡು ಕಡೆಗಳಲ್ಲಿಯೂ ಕಾಮಗಾರಿ ಪ್ರಾರಂಭಗೊಂಡಿರುತ್ತದೆ.

ಈ ವೇಳೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪಿ.ಎನ್.ಗಣಪತಿ ಭಟ್, ಸ್ಥಳೀಯರಾದ ಉಮ್ಮರ್ ಪುತ್ರಿ ದರ್ಖಾಸ್ತು, ಪಾಂಡಿ ಮಹಮ್ಮದ್ ಕುಂಞಿ,ಸುಲೈಮಾನ್ ಅಂಜಿಕ್ಕಾರ್, ಕಲ್ನಾಡ್ ಮಹಮ್ಮದ್ ಕುಂಞಿ, ದರ್ಖಾಸ್ತು ಅಂಗನವಾಡಿ ಕಾರ್ಯಕರ್ತೆ ಶಾರದಾ ಮದುಸೂಧನ್ ಹಾಗೂ ಆಶಾ ಕಾರ್ಯಕರ್ತೆ ಆಶಾ ವಿನಯ್ ಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *