ಸುಳ್ಯದ ಅಂಬೇಡ್ಕರ್ ಭವನಕ್ಕೆ ಪ.ಜಾತಿ, ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷರ ಭೇಟಿ
3 ಕೋಟಿ 10 ಲಕ್ಷ ವೆಚ್ಚದಲ್ಲಿ ತಕ್ಷಣ ಕಾಮಗಾರಿ ಆರಂಭಿಸಿ – ವರದಿ ನೀಡಿ : ಇಂಜಿನಿಯರ್ ಗೆ ಸೂಚನೆ

ಸುಳ್ಯದಲ್ಲಿ ಕಾಮಗಾರಿ ಅರ್ಧದಲ್ಲಿ ನಿಂತಿರುವ ಅಂಬೇಡ್ಕರ್ ಭವನಕ್ಕೆ ಇಂದು ಮುಂಜಾನೆ ಪ.ಜಾತಿ, ಪ.ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ.ಯವರು ಭೇಟಿ ನೀಡಿ, ಅಂಬೇಡ್ಕರ್ ಭವನ ವೀಕ್ಷಿಸಿದರು.
“ದೊಡ್ಡ ಯೋಜನೆ ಇಟ್ಟುಕೊಂಡು ಅಂಬೇಡ್ಕರ್ ಭವನ ಮಾಡಿದಂತಿದೆ. ಈಗ ಸರಕಾರದಿಂದ ಬಿಡುಗಡೆಗೊಂಡಿರುವ ಮೂರು ಕೋಟಿ ಹತ್ತು ಲಕ್ಷದಲ್ಲಿ ತಕ್ಷಣಾ ಕಾಮಗಾರಿ ಆರಂಭಿಸಿ. ಅದು ಸಾಕಾಗದೇ ಇದ್ದಲ್ಲಿ ಹೆಚ್ಚುವರಿ ಅನುದಾನಕ್ಕೆ ಸಚಿವರಲ್ಲಿ ನಾನೇ ಮಾತನಾಡುವೆ ಎಂದು ಹೇಳಿದರು.
“ಈ ಕಟ್ಟಡ ನೋಡುವಾಗ ನಿಮ್ಮ ಆಕ್ರೋಶ ಸಹಜವಾದುದು. ಸುಳ್ಯದಲ್ಲಿ ಅಂಬೇಡ್ಕರ್ ಭವನ ಆಗಬೇಕು. ಎಲ್ಲರೂ ಸೇರಿ ಮಾಡೋಣ. ನನ್ನ ಸಹಕಾರ ಇದೆ” ಎಂದು ಹೇಳಿದರು.
ಈ ಸಂದರ್ಭ ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಬಿ, ಕರ್ನಾಟಕ ಪ.ಜಾ, ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಬೆಳ್ಳಾರ್ಕರ್ ಹಾಗೂ ನಂದರಾಜ ಸಂಕೇಶ, ಕೇಶವ ಇದ್ದರು.

