“ಟ್ರಂಪ್‌ಗೆ ವೆನಸ್ವೆಲಕ್ಕೆ ಪ್ರವೇಶಿಸಿ ಮಡುರೊವರನ್ನು ಸೆರೆ ಹಿಡಿಯಬಹುದಾದರೆ…..”

“ಟ್ರಂಪ್‌ಗೆ ವೆನಸ್ವೆಲಕ್ಕೆ ಪ್ರವೇಶಿಸಿ ಮಡುರೊವರನ್ನು ಸೆರೆ ಹಿಡಿಯಬಹುದಾದರೆ ಭಾರತ ಪಾಕಿಸ್ತಾನಕ್ಕೂ ಪ್ರವೇಶಿಸಬಹುದೆಂದು ಎಐಎಂಐಎಂ ನಾಯಕ : ಅಸದುದ್ದೀನ್ ಓವೈಸಿ”

ಅಮೇರಿಕಾದ ಅಧ್ಯಕ್ಷ ಟ್ರಂಪ್ ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ವೆನೆಸ್ವೆಲ ಅಧ್ಯಕ್ಷನನ್ನು ಬಂಧಿಸಿರುವು ಜಾಗತಿಕ ಮಟ್ಟದಲ್ಲಿ ವಿವಿಧ ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪುಟಿನನ್ನು ಹತ್ಯೆಗೈಯ್ಯಲು ಪ್ರಯತ್ನಿಸಲಾಯಿತು ಎಂಬ ಒಂದು ಕಾರಣ ಮಾತ್ರ ಸಾಕು ರಷ್ಯಾಕ್ಕೆ ಸೆಲೆನ್ಸ್ಕಿಯನ್ನು ಸೆರೆಹಿಡಿಯಲು’. ಎನ್ನುವ ವಾದ ರಷ್ಯಾ ಮುಂದಿಟ್ಟಿದೆ.

ಇದೇ ಸಂದರ್ಭದಲ್ಲಿ ಭಾರತದಲ್ಲೂ ಸಮಾನವಾದ ಬೇಡಿಕೆ ಕೇಳಿಬರುತ್ತಿದ್ದು ,ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಓವೈಸಿ ಈ ವಿಷಯವನ್ನು ಇಟ್ಟುಕೊಂಡು ನಿರಂತರವಾಗಿ ಭಾರತದ ವಿರುದ್ದ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ನರೇಂದ್ರ ಮೋದಿ ಯಾಕೆ ಅಮೇರಿಕಾ ಕೈಗೊಂಡ ರೀತಿಯ ಕ್ರಮ ಕೈಗೊಳ್ಳಬಾರದು ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ರಾಷ್ಟ್ರಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಧ್ಯಕ್ಷರ ಪತ್ನಿಯನ್ನು ಕೂಡಾ ಬಂಧಿಸಿ, ಆಡಳಿತವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿನ ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವುದು, ವೆನೆಸ್ವೆಲ ಅಧ್ಯಕ್ಷರನ್ನು ಭಂದಿಸಿದ್ದು ಇದಕ್ಕೆ ಸಂಭಂಧಿಸಿ ಅಮೇರಿಕಾ ನಡೆಸಿದ ಸಂಚುಗಳು ಜಗತ್ತಿಗೆ ನೀಡಿದ ಸಂದೇಶವೇನು? ಎನ್ನುವ ಪ್ರಶ್ನೆ ಇದೀಗ ವಿವಿಧ ರಾಷ್ಟ್ರಗಳ ನಾಯಕರು ಕೇಳಲು ಆರಂಭಿಸಿದ್ದಾರೆ.

ಮಡುರೋ ಯುಎಸ್‌ನ ಕಣ್ಣಲ್ಲಿ ಅಪರಾಧಿಯಾಗಿದ್ದಾರೋ ಅಲ್ಲವೋ ಅದು ಎರಡನೆ ವಿಷಯ, ಅಮೇರಿಕಾಗೆ ವೆನಸ್ವೇಲಕ್ಕೆ ಅಕ್ರಮವಾಗಿ ಹೊಕ್ಕು ಅಲ್ಲಿನ ಅಧ್ಯಕ್ಷರನ್ನು ಬಂಧಿಸಬಹುದೆ? ಅಮೇರಿಕಾ ಹೀಗೆ ಮಾಡುವುದಾದರೆ ಪ್ರತಿಯೊಂದು ದೇಶಕ್ಕೂ ಅವರವರ ಎದುರಾಳಿಗಳ ಮೇಲೆ ಈ ವಿಧಾನ ಜಾರಿಗೊಳಿಸಬಹುದಲ್ಲವೇ ? ಜಾಗತಿಕ ರಾಜಕೀಯ ವಿಷಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬೇಡಿಕೆಗಳು ಹೆಚ್ಚಾಗುತ್ತಿವೆ.

ಈ ಮಧ್ಯೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನನ್ನು ಟ್ರಂಪ್ ಶೀಘ್ರದಲ್ಲೇ ಬಂಧಿಸಬೇಕು ಸರ್ವಾಧಿಕಾರಿಗಳು ಮತ್ತು ಏಕಾಧಿಪತಿಗಳ ವಿರುದ್ದ ಅಮೇರಿಕಾದ ಈ ರೀತಿ ಕ್ರಮ ತೆಗೆದುಕೊಳ್ಳದಿದ್ದರೆ, ಇನ್ನು ಏನು ಮಾಡಬೇಕೆಂದು ಯುಎಸ್ ತಿಳಿಸಬೇಕೆಂದು ಸೆಲೆನ್ಸ್ಕಿ ಉಳ್ಟಾ ಪ್ರಶ್ನೆ ಕೇಳಿರುವುದು ಕೂಡಾ ಇದೀಗ ಸುದ್ದಿಯಾಗುತ್ತಿದೆ.

ಒಟ್ಟಿನಲ್ಲಿ ಅಮೇರಿಕಾದ ಈ ಸರ್ವಾಧಿಕಾರಿ ಧೋರಣೆ ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Leave a Reply

Your email address will not be published. Required fields are marked *