‘ನನ್ನ ಜಾಗದಲ್ಲೇ ಕೂತ್ಕೋ..’ಎಂಬ ಸಿಎಂ ಮಾತಿಗೆ ಜೋರಾಗಿ ನಕ್ಕ ಡಿಸಿಎಂ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿ.ಎಂ. ಕುರ್ಚಿ ಕದನ ವಿಚಾರ ನಿರಂತರವಾಗಿ ಚರ್ಚೆಯಾಗುತ್ತಿರುವಾಗಲೇ. ಖುರ್ಚಿಯ ಬಗ್ಗೆ ತಮಾಶೆಯ ಪ್ರಸಂಗವೊಂದು ಬೆಂಗಳೂರಿನಲ್ಲಿ ದೇವಾಂಗ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ ವಿಪಕ್ಷಗಳು ಖುರ್ಚಿಯ ವಿಷಯ ನಿರಂತರವಾಗಿ ಅಸ್ತ್ರವಾಗಿಸಿಕೊಂಡಿದೆ. ಈ ಸಂಬಂಧ ಪಕ್ಷದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವೇದಿಕೆಯ ಮೇಲೆ ಆಡಿದ ಮಾತು ಇಡೀ ಸಭಿಕರನ್ನೇ ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.
(ಜ.4) ರಂದು ಬೆಂಗಳೂರಿನ ದೇವಾಂಗ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಪಕ್ಕದಲ್ಲಿ ಕುಳಿತಿದ್ದರು ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಿಎಂ, ಖಾಲಿಯಿದ್ದ ತಮ್ಮ ಕುರ್ಚಿಯಲ್ಲಿ ಇನ್ನೊಬ್ಬರನ್ನು ಕುಳಿತುಕೊಳ್ಳಲು ಹೇಳಿದ್ದಾರೆ.

ದೇವಾಂಗ ಸಂಘದ ಅಧ್ಯಕ್ಷ ಡಾ.ಜಿ.ರಮೇಶ್ ಅವರು ವೇದಿಕೆಯಲ್ಲಿ ಕೂರಲು ಕುರ್ಚಿಯಿಲ್ಲದೆ ಅಡ್ಡಾಡುವುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವೇದಿಕೆಗೆ ಆಗಮಿಸುತ್ತಿದ್ದಂತೆ ರಮೇಶ್ ಅವರಿಗೆ ತಮ್ಮ ಕುರ್ಚಿಯಲ್ಲೇ ಕೂರುವಂತೆ ಹೇಳಿದ್ದಾರೆ. ಇದನ್ನು ಕೇಳಿ ಡಿಸಿಎಂ ಡಿಕೆ ಶಿವಕುಮಾರ್ ಜೋರಾಗಿ ನಕ್ಕಿದ್ದು ಮಾತ್ರವಲ್ಲದೇ ನೆರೆದಿದ್ದ ಸಭಿಕರು ಕೂಡಾ ಗೊಳ್ಳೆಂದು ನಗುವಂತಾಯಿತು.
ರಾಜ್ಯದ ಸಿ.ಎಂ.ಕುರ್ಚಿ ಕದನದ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿರುವಾಗಲೇ ನಡೆದ ಈ ಪ್ರಸಂಗ ಇದೀಗ ವಾರ್ತೆಯಾಗುತ್ತಿದೆ.

