ತೀರ್ಪು ನೀಡಿದ ದಿನವೇ ರಾಜಸ್ಥಾನ ನ್ಯಾಯಾಧೀಶರ ವರ್ಗಾವಣೆ!

ತೀರ್ಪು ನೀಡಿದ್ದು ಅದಾನಿ ಕಂಪೆನಿ ವಿರುದ್ಧ….. ತೀರ್ಪು ನೀಡಿದ ದಿನವೇ ರಾಜಸ್ಥಾನ ನ್ಯಾಯಾಧೀಶರ ವರ್ಗಾವಣೆ!
ಪ್ರಧಾನಿ ಅವರ ಅತ್ಯಾಪ್ತ ಎಂದೇ ಪರಿಗಣಿಸಲಾಗುತ್ತಿರುವ ಉದ್ಯಮಿ ಗೌತಮ್ ಅದಾನಿ ಅವರ ‘ಅದಾನಿ ಗ್ರೂಪ್’ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ ದಿನವೇ ವರ್ಗಾವಣೆ ಮಾಡಲಾದ. ವಿಷಯ ಇದೀಗ ಬೆಳಕಿಗೆ ಬಂದಿದೆ.
2025ರ ಜುಲೈನಲ್ಲಿ ರಾಜಸ್ಥಾನದ ಜೈಪುರ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಕುಮಾರ್ ಗುಪ್ತಾ ಅವರು ಅದಾನಿ ನೇತೃತ್ವದ ಸಂಸ್ಥೆ ವಿರುದ್ಧ ತೀರ್ಪು ನೀಡಿದ್ದರು. ರಾಜಸ್ಥಾನದ ಸರ್ಕಾರಿ ಸ್ವಾಮ್ಯದ ಕಂಪನಿಯ ವೆಚ್ಚದಲ್ಲಿ ಅದಾನಿ ಸಂಸ್ಥೆಯು ಸಾರಿಗೆ ಶುಲ್ಕವನ್ನು ಭರಿಸಿದ್ದು ಇದರಿಂದ ಅದಾನಿ ಕಂಪೆನಿ ಸುಮಾರು 1,400 ಕೋಟಿ ರೂ.ಗಳಿಗಿಂತ ಹೆಚ್ಚು ಲಾಭ ಮಾಡಿಕೊಂಡಿದೆ. ಈ ಅಪರಾಧ ಕೃತ್ಯಕ್ಕಾಗಿ ಅದಾನಿ ಗ್ರೂಪ್ಗೆ 50 ಲಕ್ಷ ರೂ. ದಂಡ ವಿಧಿಸಲು ನ್ಯಾಧೀಶರು ಆದೇಶಿಸಿದ್ದರು.

ನ್ಯಾಯಾಧೀಶರು ಈ ತೀರ್ಪು ಪ್ರಕಟಿಸಿದ ಅದೇ ದಿನ, ರಾಜಸ್ಥಾನದ ಬಿಜೆಪಿ ಸರ್ಕಾರದ ಕಾನೂನು ಮತ್ತು ಕಾನೂನು ವ್ಯವಹಾರಗಳ ಇಲಾಖೆಯು ಅವರನ್ನು ಹುದ್ದೆಯಿಂದ ತೆಗೆದುಹಾಕುವ ಆದೇಶ ಹೊರಡಿಸಿದೆ. ಅಲ್ಲದೆ, ನ್ಯಾಯಾಧೀಶರನ್ನು ಬೇರೆಡೆಗೆ ವರ್ಗಾಯಿಸಲಾಗುವಂತೆ ಹೈಕೋರ್ಟ್ಗೆ ಮನವಿ ಮಾಡಿತು. ಈ ಬೆನ್ನಲ್ಲೇ, ರಾಜ್ಯ ಹೈಕೋರ್ಟ್, ಅವರನ್ನು ವಾಣಿಜ್ಯ ನ್ಯಾಯಾಲಯದಿಂದ ಬೀವರ್ ಜಿಲ್ಲೆಯ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿತು.

ಅಲ್ಲದೆ, ಗುಪ್ತಾ ಅವರ ಆದೇಶದ ವಿರುದ್ಧ ಅದಾನಿ ಗ್ರೂಪ್ ಹೈಕೋರ್ಟ್ ಮೆಟ್ಟಿಲೇರಿತು. ಗುಪ್ತಾ ಅವರು ತೀರ್ಪು ನೀಡಿದ್ದ ಎರಡನೇ ವಾರದಲ್ಲಿ, ಅದಾನಿ ಗ್ರೂಪ್ಗೆ ವಿಧಿಸಲಾಗಿದ್ದ ದಂಡದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತು. ಸರ್ಕಾರ ಮತ್ತು ಅದಾನಿ ಗ್ರೂಪ್ನ ಸಂಸ್ಥೆಯ ನಡುವಿನ ಒಪ್ಪಂದವನ್ನು ಲೆಕ್ಕಪರಿಶೋಧಿಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಗೆ ಸೂಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಅದಾನಿ ಗ್ರೂಪ್ ವಿರುದ್ಧದ ಪ್ರಕರಣವೇನು?
ಹೈಕೋರ್ಟ್ ತಡೆಹಿಡಿರುವ ಗುಪ್ತಾ ಅವರು ದಂಡ ವಿಧಿಸಿದ್ದ ಪ್ರಕರಣವು ಭಾರತದ ಅತ್ಯಂತ ವಿವಾದಾತ್ಮಕ ಗಣಿಗಾರಿಕೆ ಒಪ್ಪಂದಗಳ ಭಾಗವಾಗಿದೆ. 2007ರಲ್ಲಿ, ಕಲ್ಲಿದ್ದಲು ಸಚಿವಾಲಯವು ಛತ್ತೀಸ್ಗಢದ ಹಸ್ದಿಯೊ ಅರಾಂಡ್ ಅರಣ್ಯದಲ್ಲಿರುವ ಕಲ್ಲಿದ್ದಲು ನಿಕ್ಷೇಪವನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ‘ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನ್ ನಿಗಮ್ ಲಿಮಿಟೆಡ್’ಗೆ ಹಂಚಿಕೆ ಮಾಡಿತ್ತು. ಇದರಂತೆ, ಸಂಸ್ಥೆಯು ತನ್ನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ನೇರವಾಗಿ ಪಡೆಯಲು ಅವಕಾಶ ನೀಡಲಾಗಿತ್ತು.

ಆದರೆ, ಸರ್ಕಾರಿ ಸಂಸ್ಥೆಯು ಕಲ್ಲಿದ್ದಲು ರವಾನೆಯಲ್ಲಿ ಅದಾನಿ ಗ್ರೂಪ್ನೊಂದಿಗೆ ಜಂಟಿ ಒಪ್ಪಂದ ಮಾಡಿಕೊಂಡಿತು. ಅದಾನಿ ಗ್ರೂಪ್ ಈ ಗಣಿಗಾರಿಕೆಗಾಗಿ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ಅನ್ನು ಆರಂಭಿಸಿತು. ಇದರಲ್ಲಿ, ಗಣಿಗಾರಿಕೆ ಕಾರ್ಯಾಚರಣೆ ನಡೆಸಲು ಅದಾನಿ ಗ್ರೂಪ್ನ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ಗೆ ಹೊರಗುತ್ತಿಗೆ ನೀಡಿದ್ದು ಮಾತ್ರವಲ್ಲದೆ, 74% ಪಾಲನ್ನು ಬಿಟ್ಟುಕೊಟ್ಟಿತು. ಒಪ್ಪಂದದಂತೆ, ಛತ್ತೀಸ್ಗಢದಲ್ಲಿ ಗಣಿಗಾರಿಕೆ ಮಾಡಿದ ಕಲ್ಲಿದ್ದಲನ್ನು ರೈಲು ಮೂಲಕ ರಾಜಸ್ಥಾನಕ್ಕೆ ಸಾಗಿಸುವುದಕ್ಕಾಗಿ ಗಣಿಯನ್ನು ಮುಖ್ಯ ರೈಲ್ವೆ ಕಾರಿಡಾರ್ಗೆ ಸಂಪರ್ಕಿಸಲು ಅದಾನಿಯ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ ರೈಲ್ವೆ ಸೈಡ್ಟ್ರಾಕ್ಗಳನ್ನು ನಿರ್ಮಿಸಬೇಕಿತ್ತು.
2013ರಲ್ಲಿ ಗಣಿಗಾರಿಕೆ ಪ್ರಾರಂಭವಾಯಿತು. ಆದರೆ, ಹಲವಾರು ವರ್ಷಗಳ ನಂತರ ರೈಲ್ವೆ ಸೈಡ್ಟ್ರಾಕ್ಗಳನ್ನು ನಿರ್ಮಿಸಲಾಯಿತು. ಈ ಸೈಡ್ಟ್ರಾಕ್ಗಳ ನಿರ್ಮಾಣವಾಗುವವರೆಗೆ ಗಣಿಯಿಂದ ರೈಲ್ವೆ ನಿಲ್ದಾಣಗಳಿಗೆ ರಸ್ತೆಯ ಮೂಲಕ ಕಲ್ಲಿದ್ದಲನ್ನು ಸಾಗಿಸಲು ಸಾರಿಗೆ ಸಂಸ್ಥೆಯನ್ನು ತೊಡಗಿಸಿಕೊಳ್ಳಲು ಎರಡು ಸಂಸ್ಥೆಗಳು ನಿರ್ಧರಿಸಿದ್ದವು. ಆದರೆ, ಕಲ್ಲಿದ್ದಲು ಗಣಿಗಾರಿಕೆ ಮತ್ತು ವಿತರಣಾ ಒಪ್ಪಂದದಲ್ಲಿ ಸಂಸ್ಥೆಗಳ ನಡುವಿನ ಮೂಲ ಒಪ್ಪಂದವು ರಸ್ತೆ ಸಾರಿಗೆಯನ್ನು ಉಲ್ಲೇಖಿಸಲಿಲ್ಲ.
ಆದರೂ, ಅದಾನಿ ಸಂಸ್ಥೆಯು ರಸ್ತೆಯ ಮೂಲಕ ಕಲ್ಲಿದ್ದಲನ್ನು ಸಾಗಿಸಲು ಆದ ವೆಚ್ಚವನ್ನು ರಾಜಸ್ಥಾನದ ಸರ್ಕಾರಿ ಸಂಸ್ಥೆಯಿಂದ ಭರಿಸುವಂತೆ ಮಾಡಿತು. ಈ ವೆಚ್ಚವು ಬರೋಬ್ಬರಿ 1,400 ಕೋಟಿ ರೂ.ಗಳಿಂದ ಹೆಚ್ಚಿತ್ತು. ಈ ಮೊತ್ತವನ್ನು ರಾಜಸ್ಥಾನ ಸರ್ಕಾರಿ ವಿದ್ಯುತ್ ನಿಗಮ ಪಾವತಿಸಿತು. ಆದರೆ, 2018ರಲ್ಲಿ, ಅದಾನಿ ಸಂಸ್ಥೆಯು ವಿಳಂಬ ಪಾವತಿಗಳಿಗೆ ಬಡ್ಡಿಯನ್ನೂ ಪಾವತಿಸುವಂತೆ ಸರ್ಕಾರಿ ನಿಗಮದ ಮೇಲೆ ಒತ್ತಡ ಹೇರಿತು. ಆದರೆ, ಸಂಸ್ಥೆಯು ಬಡ್ಡಿ ಪಾವತಿಗೆ ನಿರಾಕರಿಸಿತು.
ಪರಿಣಾಮ, 2020ರಲ್ಲಿ ಪ್ರಕರಣವು ಜೈಪುರದ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿತು. ಅದಾನಿ ಸಂಸ್ಥೆಯೇ ಸರ್ಕಾರಿ ನಿಗಮದ ವಿರುದ್ಧ ಅರ್ಜಿ ಸಲ್ಲಿಸಿತ್ತು. ಆದರೆ, 2025ರ ಜುಲೈನಲ್ಲಿ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಗುಪ್ತಾ ಅವರು ರಾಜಸ್ಥಾನ ಸರ್ಕಾರಿ ಸಂಸ್ಥೆಯ ಪರವಾಗಿ ತೀರ್ಪು ನೀಡಿದರು. ಅದಾನಿ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿದರು.
ನ್ಯಾಯಾಧೀಶ ಗುಪ್ತ ಅವರ ಆದೇಶವೇನು?
ಗುಪ್ತಾ ಅವರು ತಮ್ಮ ತೀರ್ಪಿನಲ್ಲಿ, “ಒಪ್ಪಂದದ ಪ್ರಕಾರ, ಗಣಿಗಾರಿಕೆ ಸ್ಥಳದಿಂದ ಹತ್ತಿರದ ರೈಲ್ವೇ ಮಾರ್ಗದವರೆಗೆ ರೈಲ್ವೆ ಸೈಡಿಂಗ್ ಅನ್ನು ನಿರ್ಮಿಸುವುದು, ಮತ್ತು ಅಭಿವೃದ್ಧಿಪಡಿಸುವುದು ಅದಾನಿ ಗ್ರೂಪ್ನ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂಬುದನ್ನು ಗಮನಿಸಬೇಕು. ರೈಲ್ವೇ ಸೈಡ್ಟ್ರಾಕ್ಅನ್ನು ನಿರ್ಮಿಸಲು ಅದಾನಿ ಕಂಪನಿಯು ವಿಫಲವಾಗಿದ್ದರಿಂದ, ತನ್ನದೇಲೋಪಕ್ಕಾಗಿ ಕನಿಷ್ಠ ರಸ್ತೆ ಸಾರಿಗೆ ಶುಲ್ಕದ ಹೊರೆಯನ್ನು ಆ ಕಂಪನಿಯೇ ಪಾವತಿಸಬೇಕು” ಎಂದು ಹೇಳಿದರು.
ಆದರೆ, ಸರ್ಕಾರಿ ಸಂಸ್ಥೆಯು ಕಲ್ಲಿದ್ದಲು ರವಾನೆಯಲ್ಲಿ ಅದಾನಿ ಗ್ರೂಪ್ನೊಂದಿಗೆ ಜಂಟಿ ಒಪ್ಪಂದ ಮಾಡಿಕೊಂಡಿತು. ಅದಾನಿ ಗ್ರೂಪ್ ಈ ಗಣಿಗಾರಿಕೆಗಾಗಿ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ಅನ್ನು ಆರಂಭಿಸಿತು. ಇದರಲ್ಲಿ, ಗಣಿಗಾರಿಕೆ ಕಾರ್ಯಾಚರಣೆ ನಡೆಸಲು ಅದಾನಿ ಗ್ರೂಪ್ನ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ಗೆ ಹೊರಗುತ್ತಿಗೆ ನೀಡಿದ್ದು ಮಾತ್ರವಲ್ಲದೆ, 74% ಪಾಲನ್ನು ಬಿಟ್ಟುಕೊಟ್ಟಿತು. ಒಪ್ಪಂದದಂತೆ, ಛತ್ತೀಸ್ಗಢದಲ್ಲಿ ಗಣಿಗಾರಿಕೆ ಮಾಡಿದ ಕಲ್ಲಿದ್ದಲನ್ನು ರೈಲು ಮೂಲಕ ರಾಜಸ್ಥಾನಕ್ಕೆ ಸಾಗಿಸುವುದಕ್ಕಾಗಿ ಗಣಿಯನ್ನು ಮುಖ್ಯ ರೈಲ್ವೆ ಕಾರಿಡಾರ್ಗೆ ಸಂಪರ್ಕಿಸಲು ಅದಾನಿಯ ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ ರೈಲ್ವೆ ಸೈಡ್ಟ್ರಾಕ್ಗಳನ್ನು ನಿರ್ಮಿಸಬೇಕಿತ್ತು.
2013ರಲ್ಲಿ ಗಣಿಗಾರಿಕೆ ಪ್ರಾರಂಭವಾಯಿತು. ಆದರೆ, ಹಲವಾರು ವರ್ಷಗಳ ನಂತರ ರೈಲ್ವೆ ಸೈಡ್ಟ್ರಾಕ್ಗಳನ್ನು ನಿರ್ಮಿಸಲಾಯಿತು. ಈ ಸೈಡ್ಟ್ರಾಕ್ಗಳ ನಿರ್ಮಾಣವಾಗುವವರೆಗೆ ಗಣಿಯಿಂದ ರೈಲ್ವೆ ನಿಲ್ದಾಣಗಳಿಗೆ ರಸ್ತೆಯ ಮೂಲಕ ಕಲ್ಲಿದ್ದಲನ್ನು ಸಾಗಿಸಲು ಸಾರಿಗೆ ಸಂಸ್ಥೆಯನ್ನು ತೊಡಗಿಸಿಕೊಳ್ಳಲು ಎರಡು ಸಂಸ್ಥೆಗಳು ನಿರ್ಧರಿಸಿದ್ದವು. ಆದರೆ, ಕಲ್ಲಿದ್ದಲು ಗಣಿಗಾರಿಕೆ ಮತ್ತು ವಿತರಣಾ ಒಪ್ಪಂದದಲ್ಲಿ ಸಂಸ್ಥೆಗಳ ನಡುವಿನ ಮೂಲ ಒಪ್ಪಂದವು ರಸ್ತೆ ಸಾರಿಗೆಯನ್ನು ಉಲ್ಲೇಖಿಸಲಿಲ್ಲ.
ಆದರೂ, ಅದಾನಿ ಸಂಸ್ಥೆಯು ರಸ್ತೆಯ ಮೂಲಕ ಕಲ್ಲಿದ್ದಲನ್ನು ಸಾಗಿಸಲು ಆದ ವೆಚ್ಚವನ್ನು ರಾಜಸ್ಥಾನದ ಸರ್ಕಾರಿ ಸಂಸ್ಥೆಯಿಂದ ಭರಿಸುವಂತೆ ಮಾಡಿತು. ಈ ವೆಚ್ಚವು ಬರೋಬ್ಬರಿ 1,400 ಕೋಟಿ ರೂ.ಗಳಿಂದ ಹೆಚ್ಚಿತ್ತು. ಈ ಮೊತ್ತವನ್ನು ರಾಜಸ್ಥಾನ ಸರ್ಕಾರಿ ವಿದ್ಯುತ್ ನಿಗಮ ಪಾವತಿಸಿತು. ಆದರೆ, 2018ರಲ್ಲಿ, ಅದಾನಿ ಸಂಸ್ಥೆಯು ವಿಳಂಬ ಪಾವತಿಗಳಿಗೆ ಬಡ್ಡಿಯನ್ನೂ ಪಾವತಿಸುವಂತೆ ಸರ್ಕಾರಿ ನಿಗಮದ ಮೇಲೆ ಒತ್ತಡ ಹೇರಿತು. ಆದರೆ, ಸಂಸ್ಥೆಯು ಬಡ್ಡಿ ಪಾವತಿಗೆ ನಿರಾಕರಿಸಿತು.
“ತನ್ನ ವಿಳಂಬ ಕಾಮಗಾರಿಯ ಕಾರಣಕ್ಕೆ ಕಂಪನಿಯು 1,400 ಕೋಟಿ ರೂ.ಗಳಿಗಿಂತ ಹೆಚ್ಚಿನ ಸಾರಿಗೆ ವೆಚ್ಚವನ್ನು ಸರ್ಕಾರಿ ಸಂಸ್ಥೆಯಿಂದ ಪಡೆದುಕೊಂಡಿದೆ. ಜೊತೆಗೆ, ಅಂತಹ ವೆಚ್ಚಕ್ಕೆ ಬಡ್ಡಿ ಹೊರೆಯನ್ನು ಹಾಕಿ, ‘ಹೆಚ್ಚುವರಿ ಲಾಭ’ ಪಡೆಯಲು ಪ್ರಯತ್ನಿಸಿದೆ” ಎಂದು ಹೇಳಿದ ನ್ಯಾಯಾಲಯವು, ‘ಪಾರ್ಸಾ ಕೆಂಟೆ ಕೊಲಿಯರೀಸ್ ಲಿಮಿಟೆಡ್’ಗೆ 50 ಲಕ್ಷ ರೂ. ದಂಡ ವಿಧಿಸಿತು. ಅಲ್ಲದೆ, ಸರ್ಕಾರಿ ಸಂಸ್ಥೆ ಮತ್ತು ಅದಾನಿ ಗ್ರೂಪ್ ನಡುವಿನ ಒಪ್ಪಂದವನ್ನು ಲೆಕ್ಕಪರಿಶೋಧನೆ ಮಾಡುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಕೋರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಪರಿಣಾಮ, 2020ರಲ್ಲಿ ಪ್ರಕರಣವು ಜೈಪುರದ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿತು. ಅದಾನಿ ಸಂಸ್ಥೆಯೇ ಸರ್ಕಾರಿ ನಿಗಮದ ವಿರುದ್ಧ ಅರ್ಜಿ ಸಲ್ಲಿಸಿತ್ತು. ಆದರೆ, 2025ರ ಜುಲೈನಲ್ಲಿ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಗುಪ್ತಾ ಅವರು ರಾಜಸ್ಥಾನ ಸರ್ಕಾರಿ ಸಂಸ್ಥೆಯ ಪರವಾಗಿ ತೀರ್ಪು ನೀಡಿದರು. ಅದಾನಿ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿದರು.
ಗುಪ್ತಾ ಅವರ ಈ ಆದೇಶಕ್ಕೆ ಜುಲೈ 18 ರಂದು ಹೈಕೋರ್ಟ್ ತಡೆ ನೀಡಿದೆ. ಅಂದಿನಿಂದ, ಈ ಪ್ರಕರಣದ ವಿಚಾರಣೆಗಳು ಮುಂದುವರೆದಿವೆ. ಮುಂದಿನ ವಿಚಾರಣೆಯು 2026ರ ಜನವರಿ ಕಡೆಯ ವಾರದಲ್ಲಿ ನಡೆಯಲಿದೆ.
(ಈ ಪ್ರಕರಣದ ಕುರಿತು ಪ್ರತಿಕ್ರಿಯೆ ಕೇಳಿ ಇಂಗ್ಲಿಷ್ ಸುದ್ದಿಸಂಸ್ಥೆ ‘ಸ್ಕ್ರೋಲ್.ಇನ್’ ರಾಜಸ್ಥಾನ ಸರ್ಕಾರದ ಕಾನೂನು ಮತ್ತು ಕಾನೂನು ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿದೆ. ಅಲ್ಲದೆ, ಗುಪ್ತಾ ಅವರ ವರ್ಗಾವಣೆಯ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿ ಹೈಕೋರ್ಟ್ ರಿಜಿಸ್ಟ್ರಾರ್ಗೂ ಪ್ರಶ್ನೆಗಳನ್ನು ಕಳಿಸಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲವೆಂದು ಸುದ್ದಿಸಂಸ್ಥೆ ವರದಿ ಮಾಡಿದೆ.)