ಸುಳ್ಯದ ಅರಂಬೂರಿನ ಬಳಿ ಇಂದು ಮಧ್ಯಾಹ್ನ ನಡೆದ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ದುರ್ಮರಣ
ಜ.೫ ಸುಳ್ಯ ತಾಲೂಕಿನ ಅರಂಬೂರಿನ ಬಳಿ ಇಂದು ಮದ್ಯಾಹ್ನ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಲ್ಮಾನ್ ಎನ್ನುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ತಿಳಿದು ಬಂದಿದೆ. ಸಲ್ಮಾನ್ ಅವರು ಬೈಕ್ನಲ್ಲಿ ಹೋಗುತ್ತಿದ್ದಾಗ ಅರಂಬೂರಿನ ಬಳಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಬೈಕ್ ಪಲ್ಟಿಯಾಗಿದೆಯೆಂದು ,ತಿಳಿದು ಬಂದಿದ್ದು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

