ಪಶ್ಚಿಮ ಬಂಗಾಳದ ಚುನಾವಣೆಯ ಸ್ಫೋಟಕ ಭವಿಷ್ಯ – ದೀದಿ ಸಾಮ್ರಾಜ್ಯ ಪತನ! ಮಮತಾ ಬ್ಯಾನರ್ಜಿ ಅಧಿಕಾರ ಅಂತ್ಯ?

ಇದೇ ವರ್ಷ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಸತತ ಮೂರು ಚುನಾವಣೆ ಗೆದ್ದಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಮತ್ತೆ ಅಧಿಕಾರಕ್ಕೇರಲಿದೆಯಾ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, ಮಮತಾ ಬ್ಯಾನರ್ಜಿ ಯುಗ ಮುಂದಿನ ವರ್ಷ ಮುಗಿಯಲಿದೆ.

ದೇಶದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ತೃಣಮೂಲ ಕಾಂಗ್ರೆಸ್ಸಿಗೆ ಭರ್ಜರಿ ಫೈಟ್ ನೀಡಲು ಬಿಜೆಪಿ ಭರ್ಜರಿ ಪೂರ್ವ ಸಿದ್ದತೆಯನ್ನು ನಡೆಸುತ್ತಿದೆ.

ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ,ಮತ್ತು ಮೋದಿ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿಕಾರಿದ್ದು ಅವರನ್ನು ಮಹಾಭಾರತದ ಪಾತ್ರದಾರಿಗಳಾದ ದುರ್ಯೋಧನ ಮತ್ತು ದುಶ್ಯಾಸನ ರೆಂದು ಜರೆದಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಇದೇ ವರ್ಷ ನಡೆಯಲಿದ್ದು, ಒಟ್ಟು ಐದು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಮಾರ್ಚ್ – ಮೇ ತಿಂಗಳ ಅವಧಿಯಲ್ಲಿ ನಡೆಯಬೇಕಿದೆ. ಈ ಪೈಕಿ, ಅಸ್ಸಾಂ ಮತ್ತು ಪುದುಚೇರಿ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ.

ದೇಶದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಅಸೆಂಬ್ಲಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಕೂಡಾ ಒಂದು. ಈ ಬಾರಿ ಶತಾಯುಗತಾಯು ಗದ್ದುಗೆಗೆ ಏರಬೇಕೆಂದು ಹಠತೊಟ್ಟಿರುವ ಬಿಜೆಪಿ, ಸಾಕಷ್ಟು ಪೂರ್ವತಯಾರಿಯನ್ನು ಮಾಡಿಕೊಳ್ಳುತ್ತಿದೆ. 2011, 2016 ಮತ್ತು 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ( All India Trinamool Congress ) ಪಾರ್ಟಿ ಗೆಲುವು ಸಾಧಿಸಿಕೊಂಡು ಬರುತ್ತಿದೆ. ಆದರೆ, SIR ಅಳವಡಿಸಿದ ನಂತರದ ಈ ಬಾರಿಯ ಚುನಾವಣೆಯಲ್ಲಿ ಏನಾಗಬಹುದು ಎನ್ನುವ ಆತಂಕ ಕಾಡುತ್ತಿರುವಾಗಲೇ ಖ್ಯಾತ ಜ್ಯೋತಿಷಿಯೊಬ್ಬರು ಈ ಬಗ್ಗೆ ಭವಿಷ್ಯ ನುಡಿದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

ಒಂದು ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತರಾಗಿದ್ದ ಮಮತಾ ಬ್ಯಾನರ್ಜಿ, ಮೋದಿ ಮತ್ತು ಶಾ ಅವರನ್ನು ಪರೋಕ್ಷವಾಗಿ ದುರ್ಯೋಧನ ಮತ್ತು ದುಶ್ಯಾಃಶನರಿಗೆ ಹೋಲಿಸಿದ್ದಾರೆ.

ಪ್ರಶಾಂತ್ ಕಿಣಿ ಎನ್ನುವ ಖಾತ ಜ್ಯೋತಿಷಿ ಪಶ್ಚಿಮ ಬಂಗಾಳ ಚುನಾವಣೆಯ ಬಗ್ಗೆ ಏಪ್ರಿಲ್ 2024ರಲ್ಲೇ ಭವಿಷ್ಯವನ್ನು ನುಡಿದಿದ್ದರು. ಅದನ್ನು ಮತ್ತೆ ಅವರು ಪುನರಾವರ್ತಿಸಿದ್ದಾರೆ. ಅವರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಮತಾ ಬ್ಯಾನರ್ಜಿ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವೀಟರ್ (ಎಕ್ಸ್) ನಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಅವರ ಪ್ರಕಾರ, ಹಾಲೀ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ. ಚುನಾವಣೆಯ ದಿನಾಂಕಕ್ಕೆ ಎರಡು ವರ್ಷ ಮುನ್ನವೇ ಅವರು ಭವಿಷ್ಯವನ್ನು ನುಡಿದಿದ್ದರು. 2026ರಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಮಾತ್ರ ಇವರು ತಮ್ಮ ಭವಿಷ್ಯದಲ್ಲಿ ಉಲ್ಲೇಖಿಸಿದ್ದರು.

ಸುಮಾರು 88 ಸಾವಿರ ಫಾಲೋವರ್ಸ್ ಅನ್ನು ಹೊಂದಿರುವ ಪ್ರಶಾಂತ್ ಕಿಣಿ, ತಮ್ಮ ಭವಿಷ್ಯದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಕೆಳೆದುಕೊಳ್ಳಲಿದ್ದಾರೆ ಎಂದಷ್ಟೇ ಹೇಳಿದ್ದಾರೆಯೇ ಹೊರತು, ಅವರ
ಟಿಎಂಸಿ ಪಾರ್ಟಿಗೆ ಸೋಲಾಗುತ್ತದೆ ಎಂದಾಗಲಿ ಅಥವಾ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನುವುದರ ಬಗ್ಗೆ ವಿವರಣೆಯನ್ನು ನೀಡಲಿಲ್ಲ.

ಮಮತಾ ಬ್ಯಾನರ್ಜಿಯವರ ಸೋದರಳಿಯ ಮತ್ತು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದ ಲೋಕಸಭಾ ಸದಸ್ಯರೂ ಆಗಿರುವ ಅಭಿಷೇಕ್ ಬ್ಯಾನರ್ಜಿ, ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಅವರನ್ನು ಮುಂದಿನ ಮಮತಾ ಬ್ಯಾನರ್ಜಿಯವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ. ಉತ್ತಮ ವಾಗ್ಮಿಯೂ ಆಗಿರುವ ಇವರನ್ನು ಮಮತಾ ಬ್ಯಾನರ್ಜಿ ಸಿಎಂ ಮಾಡಲು ಹೊರಟಿದ್ದಾರೆ ಎನ್ನುವ ಮಾತುಗಳೂ ರಾಜ್ಯದಲ್ಲಿ ಕೇಳಿ ಬರುತ್ತಿವೆ.

ಹಾಗಾಗಿ, ಒಂದು ವೇಳೆ, ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಚುನಾವಣೆಯನ್ನು ಏನಾದರೂ ಗೆದ್ದರೂ, ಅವರು ತಮ್ಮ ಸೋದರಳಿಯನನ್ನು ಸಿಎಂ ಆಗಿ ನೇಮಿಸಿ, ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಸಾದ್ಯತೆಯೂ ಇದೆ. ಹಾಗಾಗಿ, ಪ್ರಶಾಂತ್ ಕಿಣಿಯವರ ಭವಿಷ್ಯ ಏನು ಹೇಳುತ್ತೆ ಎನ್ನುವುದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.?

ಟಿಎಂಸಿ ಅಧಿಕಾರಕ್ಕೆ ಬಂದರೂ,ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ಏರುವುದಿಲ್ಲ ಎಂದೋ ಅಥವಾ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದೋ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *