ಕೈ ಪಾಳಯದಲ್ಲಿ ಸಂಕ್ರಾಂತಿಯ’ ಕ್ರಾಂತಿ ! ಸಿದ್ದರಾಮಯ್ಯ ಸಚಿವ ಸಂಪುಟದಿಂದ ಯಾರು ಒಳಕ್ಕೆ ? ಯಾರು ಹೊರಕ್ಕೆ ? ಇಲ್ಲಿದೆ ಆ ಇಂಟರೆಸ್ಟಿಂಗ್ ಪಟ್ಟಿ
ಬೆಂಗಳೂರು: ಕರ್ನಾಟಕ ರಾಜಕೀಯದ ಪಡಸಾಲೆಯಲ್ಲಿ ಇದೀಗ ಬಿರುಸಿನ ತಯಾರಿಗಳು’ ಆರಂಭವಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದು, ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರದಂತೆ ಸಿಎಂ ಪಟ್ಟಕ್ಕಾಗಿ ಡಿ ಕೆ ಶಿವಕುಮಾರ್ ಅವರು ಪಣ ತೊಟ್ಟಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಇದೀಗ ತಾರಕಕ್ಕೆ ತಲುಪಿದೆ, ಹೊಸ ವರ್ಷದ ಹೊತ್ತಲಿ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂದು ಹೇಳಲಾಗಿತ್ತಾದರೂ ಅದು ಸುಳ್ಳಾಯಿತು. ಇದೀಗ ನವೆಂಬರ್ ಆಯ್ತು, ಡಿಸೆಂಬರ್ ಆಯ್ತು.. ಇದೀಗ ಜನವರಿಯ ಸಂಕ್ರಾಂತಿ ಗಡುವು ಮುನ್ನಲೆಗೆ ಬಂದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕುರ್ಚಿ ಕದನಕ್ಕೆ ಮತ್ತಷ್ಟು ಕಾದಾಟ ಹೆಚ್ಚಾಗುವ ಸಾಧ್ಯತೆ ಇದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಅಂತಿಮ ಹಂತದ ಫೈಟ್ ನಡೆಯುತ್ತಿದ್ದು, ಒಬ್ಬೊರಿಗೊಬ್ಬರೂ ಈಗ ನೇರವಾಗಿ ಫೀಲ್ಡಿಗಿಳಿದು ರಾಜಕೀಯದ ಕೊನೆಯ ಅಸ್ತ್ರಗಳನ್ನು ಹೂಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಇತ್ತ ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಹಲವು ಗೊಂದಲಗಳು ಉಂಟಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಟೀ ಕಾಫಿ ಮೀಟಿಂಗ್ ಮೂಲಕ ಗೊಂದಲವನ್ನ ಬಗೆಹರಿಸಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸೂಚನೆ ನೀಡಿದ್ದರು.
ಅದರಂತೆ ಎರಡು ಬಾರೀ ಟೀ ಕಾಫಿ ಮೀಟಿಂಗ್ ಮಾಡುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿರುವ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಇನ್ನೂ ಕುರ್ಚಿ ಕಾಳಗ ಕಡಿಮೆಯಾಗಿಲ್ಲ. ಇದರ ನಡುವೆ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ನ ಹಿರಿಯ ನಾಯಕರು ಸಂಪುಟ ಪುನರ್‌ರಚನೆಗೆ ಒತ್ತಡ ಹಾಕಿದ್ದು, ಜನವರಿ ಸಂಕ್ರಾಂತಿ ಹೊತ್ತಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯದಲ್ಲೇ ಸಂಪುಟ ಸೇರುವ ಕಾಲ ಬಂದಿತು ಎಂದು ಖುಷಿಯಾಗಿರುವ ಸಚಿವಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿದ್ದಾಗಿ ತಿಳಿದುಬರುತ್ತಿದೆ. ಸಂಕ್ರಾಂತಿ ಬಳಿಕ ಸಚಿವ ಸಂಪುಟ ಪುನರ್ ರಚನೆ ಆಗಬಹುದು ಎಂದು ಹೇಳಲಾಗುತ್ತಿದೆ. ಜನವರಿಯಲ್ಲಿ ಸಂಕ್ರಾಂತಿ ಬಳಿಕವೇ ಸಂಪುಟಕ್ಕೆ ಸರ್ಜರಿ ಮಾಡಬಹುದು ಎಂಬ ಮಾಹಿತಿ ಪ್ರಜಾವಾರ್ತೆಗೆ ಲಭ್ಯವಾಗಿದೆ.
ಹಾಲಿ ಸಚಿವರಿಗೆ ಪಕ್ಷದ ಕೆಲಸ ನೀಡಿ ಎಂದಿರೋ ಹೈಕಮಾಂಡ್ ನಾಯಕರು, ಸಂಪುಟ ಪುನಾರಚನೆ ಬದಲಾಗಿ 4 ಪ್ರಮುಖ ಸ್ಥಾನಗಳನ್ನು ತುಂಬುವ ಬಗ್ಗೆ ಚರ್ಚೆ ಮಾಡಿದ್ದಾರೆ. ನಾಗೇಂದ್ರ, ರಾಜಣ್ಣರಿಂದ ಖಾಲಿಯಾದ ಸ್ಥಾನ ತುಂಬೋದು, ಪರಿಷತ್ ಸಭಾಪತಿ & ಉಪಸಭಾಪತಿ ಆಯ್ಕೆ ಬಗ್ಗೆ ಪ್ರಸ್ತಾಪವೂ ಆಗಿದೆ. ಎಲ್ಲ ಆಯ್ಕೆಯನ್ನೂ ಹೈಕಮಾಂಡ್ ಬಹಳ ಮುಕ್ತವಾಗಿಯೇ ಇಟ್ಟಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಎಂಟರಿಂದ ಹತ್ತರಷ್ಟು ಸಚಿವರನ್ನ ಕೈಬಿಟ್ಟು ಹೊಸ ಮುಖಗಳಿಗೆ ಹಾಗೂ ಹಿರಿಯ ಶಾಸಕರನ್ನ ಸಂಪುಟಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿರುವ ಅಸಮರ್ಥ ಸಚಿವರನ್ನ ಕೈ ಬಿಡುವ ಕುರಿತು ಚರ್ಚೆ ಶುರುವಾಗಿದ್ದು, ಸಚಿವರ ಸಾಮರ್ಥ್ಯದ ಬಗ್ಗೆ ವರಿಷ್ಠರಿಗೆ ಕೆಪಿಸಿಸಿ, ಉಸ್ತುವಾರಿ ಬಳಿ ವರದಿಯನ್ನ ತರಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಕಳೆದೆರಡು ವರ್ಷಗಳಲ್ಲಿ ಯಾವ್ಯಾವ ಸಚಿವರ ಕಾರ್ಯವೈಖರಿ ಹೇಗಿದೆ ಎಂಬ ಬಗ್ಗೆ ಹೈಕಮಾಂಡ್ ಅಳೆದು ತೂಗಿ ಸಂಪುಟದಿಂದ ಕೈ ಬಿಡಲು ನಿರ್ಧಾರಿಸಿದೆ ಎನ್ನಲಾಗುತ್ತಿದೆ.
ಯಾರೆಲ್ಲಾ ಸಂಪುಟದಿಂದ ಹೊರಕ್ಕೆ ? ಇಲ್ಲಿದೆ ಆ ಪಟ್ಟಿ
- ಕೆಎಚ್ ಮುನಿಯಪ್ಪ
- ಎಂ.ಸಿ. ಸುಧಾಕರ್
- ರಹೀಂ ಖಾನ್
- ಎನ್ ಎಸ್ ಬೋಸರಾಜು
- ಡಿ. ಸುಧಾಕರ್
- ಲಕ್ಷ್ಮೀ ಹೆಬ್ಬಾಳ್ಕರ್
- ಮಧು ಬಂಗಾರಪ್ಪ
- ಶಿವಾನಂದ ಪಾಟೀಲ್
ಯಾರು ಸಂಪುಟಕ್ಕೆ ಸೇರ್ಪಡೆ ?
- ಬಿಕೆ ಹರಿಪ್ರಸಾದ್
- ಅನಿಲ್ ಚಿಕ್ಕಮಾದು
- ವಿನಯ್ ಕುಲಕರ್ಣಿ
- ವಿಜಯಾನಂದ ಕಾಶಪ್ಪನವರ್
- ಬಿ ಆರ್ ಪಾಟೀಲ
- ಅಜಯ್ ಸಿಂಗ್
- ಟಿ ರಘುಮೂರ್ತಿ
- ಬಿಕೆ ಸಂಗಮೇಶ್
- ತನ್ವೀರ್ ಸೇಠ್

