ಗಣರಾಜ್ಯೋತ್ಸವದ ಅಂಗವಾಗಿ ಜ.26 ನಾಳೆ ಪಂಜದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪ್ರಜಾಧ್ವನಿಯ ಸಂಯುಕ್ತ ಆಶ್ರಯದಲ್ಲಿ ಸಂವಿಧಾನದ ಜಾಗೃತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಪ್ರಜಾವಾರ್ತೆ.
ಜ.25
ಪ್ರಜಾಧ್ವನಿ ಮತ್ತು ಪಂಜ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಗಣರಾಜ್ಯೋತ್ಸವ ಆಚರಣೆ ಮತ್ತು ಸಂವಿಧಾನದ ಜಾಗೃತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿರುವುದೆಂದು ಸಂಘಟಕರು ತಿಳಿಸಿರುತ್ತಾರೆ. ಕಳೆದ ಕೆಲವು ಸಮಯಗಳಿಂದ ಪ್ರಜಾಧ್ವನಿ ಸಂಘಟನೆ ನಿರಂತರವಾಗಿ ವಿವಿಧ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಿಧಾನದ ಬಗ್ಗೆ ಜಾಗೃತಿ ಮತ್ತು ಸಂವಾದ, ಹಾಗೂ ಸಂವಿಧಾನ ಮುಂದಿಡುವ ಸಮಾಜದಲ್ಲಿನ ಕೂಡಿಬಾಳುವಿಕೆಯ ಅಗತ್ಯತೆ ಮತ್ತು ಕಾನೂನು ಅರಿವು ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದು, ಈ ಕಾರ್ಯಕ್ಕೆ ಈವರೆಗೂ ವಿವಿಧ ಸಾಹಿತಿಗಳು, ನಿವೃತ್ತ ಪ್ರಾಂಶುಪಾಲರುಗಳು, ಸಂವಿಧಾನ ತಜ್ಞರುಗಳು ಪ್ರಜಾಧ್ವನಿಯೊಂದಿಗೆ ಕೈಜೋಡಿಸುತ್ತಿರುವುದಾಗಿ ತಿಳಿದು ಬಂದಿರುತ್ತದೆ.

