ಸೋಮಶೇಖರ್ ಕೊಯಿಂಗಾಜೆಯವರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ನನಗೆ ಅತ್ಯಂತ ದಿಗ್ಭ್ರಮೆ ಮತ್ತು ನೋವನ್ನುಂಟುಮಾಡಿದೆ – ಮಹಮದ್ ಕುಂಞಿ ಗೂನಡ್ಕ

ಸೋಮಶೇಖರ್ ಅವರು ಕಳೆದ 28 ವರ್ಷಗಳಿಂದ ಸಂಪಾಜೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಪಕ್ಷದ ಏಳಿಗೆಗೆ ಅಪಾರ ಶ್ರಮವಹಿಸಿದ್ದಾರೆ. ಇಂತಹ ಅನುಭವೀ ನಾಯಕರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ನನಗೆ ಅತೀವ ದುಃಖವನ್ನು ಉಂಟುಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಹಮದ್ ಕುಂಞಿ ಗೂನಡ್ಕರವರು ತಿಳಿಸಿದ್ದಾರೆ.

ನಾನು ಮತ್ತು ಸೋಮಶೇಖರ್ ಕೊಯಿಂಗಾಜೆಯವರು ಕಾರ್ಯಕರ್ತರ ಶ್ರಮದೊಂದಿಗೆ ಒಂದಾಗಿ ಪಕ್ಷವನ್ನು ಕಟ್ಟಿಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಸಂಪಾಜೆಯಲ್ಲಿ ಪಕ್ಷದ ಉನ್ನತಿಗಾಗಿ ನಾವು ಅನೇಕ ತ್ಯಾಗಗಳನ್ನು ಸಹ ಮಾಡಿದ್ದೇವೆ ಎಂದು ಅವರು ಹೇಳಿದರು. ಬಹುಸಂಖ್ಯಾತರ ಪ್ರಬಲ ಸಮುದಾಯದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡು ಸಹಕಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದವರು ಅವರು. ಉನ್ನತ ಹುದ್ದೆಗಳ ಅವಕಾಶಗಳಿದ್ದರು ಅದೆಲ್ಲವನ್ನು ಬಿಟ್ಟು ಸಂಪಾಜೆಯಲ್ಲೇ ನಿಂತು ತಳಮಟ್ಟದಿಂದ ಪಕ್ಷವನ್ನು ಕಟ್ಟಿಬೆಳೆಸಿದಂತಹ ಸೋಮಶೇಖರ್ ಕೊಯಿಂಗಾಜೆಯಂತಹವರ ನಾಯಕತ್ವ ಇನ್ನು ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುವುದು ಕಷ್ಟಸಾಧ್ಯವೆಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *