ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷತೆಗೆ ಸೋಮಶೇಖರ್ ಕೊಯಿಂಗಾಜೆಯವರ ರಾಜಿನಾಮೆ .! ಲಭ್ಯ ಪ್ರಮುಖರ ತುರ್ತು ಸಭೆ ಕರೆದ ಸಂಪಾಜೆ ವಲಯ ಕಾಂಗ್ರೆಸ್
ಜ.24.
ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷತೆಗೆ ಸೋಮಶೇಖರ್ ಕೊಯಿಂಗಾಜೆ ಅವರು ರಾಜಿನಾಮೆ ನೀಡಿದ್ದು ಮತ್ತು ಪತ್ರಿಕಾಗೋಷ್ಠಿ ನಡೆಸಿರುವ ವಿಷಯಯಕ್ಕೆ ಸಂಭಂಧಿಸಿ ಚರ್ಚಿಸಲು ಬ್ಲಾಕ್ ನಾಯಕರುಗಳ ಒಪ್ಪಿಗೆಯೊಂದಿಗೆ ಸಂಪಾಜೆಯ ವಲಯ ಕಾಂಗ್ರೆಸ್ ತುರ್ತು ಸಭೆಯನ್ನು ಪ್ರದಾನ ಕಾರ್ಯದರ್ಶಿ ಲೂಕಾಸ್. ಟಿ.ಐ ಅವರ ನೇತೃತ್ವದಲ್ಲಿ ಕರೆಯಲಾಯಿತು.
ಸಂಪಾಜೆ ವಲಯ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರಾದ ಜಾನಿ.ಕೆ.ಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸೋಮಶೇಖರ್ ಕೊಯಿಂಗಾಜೆ ಅವರ ರಾಜಿನಾಮೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೂಲಂಕಷ ಚರ್ಚೆ ನಡೆಯಿತು. ಸಭೆಯಲ್ಲಿ ಸೋಮಶೇಖರ್ ಕೊಯಿಂಗಾಜೆ ಅವರು ಕಳೆದ 28 ವರ್ಷಗಳ ಕಾಲ ಪಕ್ಷಕ್ಕೋಸ್ಕರ ಮಾಡಿದ ನಿಸ್ವಾರ್ಥ ಸೇವೆಯ ಬಗ್ಗೆ ಚರ್ಚಿಸಲಾಯಿತು.ಇದೀಗ ಸೋಮಶೇಖರ್ ಕೊಯಿಂಗಾಜೆ ಅವರು ರಾಜಿನಾಮೆ ಕೊಟ್ಟಿರುವುದರ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದಿದ್ದು, ಇಡೀ ಸಂಪಾಜೆ ಕಾಂಗ್ರೆಸ್ ಸೋಮಶೇಖರ್ ಅವರ ಅಭಿಮಾನಿಗಳೇ ಆಗಿದ್ದು ಮುಂದೆಯೂ ಸೋಮಶೇಖರ್ ಕೊಯಿಂಗಾಜೆ ಅವರನ್ನು ಗೌರವದಿಂದ ನಡೆಸಿಕೊಂಡು ಅವರ ಸಲಹೆ ಸೂಚನೆಯೊಂದಿಗೆಯೇ ಸಂಪಾಜೆ ಕಾಂಗ್ರೆಸ್ ಅನ್ನು ಕಟ್ಟುವ ಕೆಲಸ ಮಾಡಬೇಕು ಈ ಬಗ್ಗೆ ಅವರನ್ನು ಬೇಟಿ ಮಾಡಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆಯು ಒಕ್ಕೊರಲಿನಿಂದ ನಿರ್ಣಯಿಸಲಾಯಿತು.ನಿಯಮಾನುಸಾರ
ಮುಂದಿನ ತೀರ್ಮಾನದ ವರೆಗೂ ವಲಯ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ವಸಂತ ಪೆಲ್ತಡ್ಕ ಅವರು ಪ್ರಭಾರ ಅಧ್ಯಕ್ಷರಾಗಿರಬೇಕೆಂದು ಸಭೆಯು ಒಕ್ಕೊರಲಿನಿಂದ ತೀರ್ಮಾನ ಮಾಡಲಾಯಿತು.
ತುರ್ತು ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರು ಹಾಗೂ ಸಂಪಾಜೆ ವಲಯ ಕಾಂಗ್ರೆಸ್ಸಿನ ಕಾರ್ಯಧ್ಯಕ್ಷರಾದ ಜಾನಿ.ಕೆ.ಪಿ. ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ,ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರದಾನ ಕಾರ್ಯದರ್ಶಿ ರಾಜು ನೆಲ್ಲಿಕುಮೇರಿ, ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಕಾಂಗ್ರೆಸ್ ಖಜಾಂಚಿ ತಾಜ್ ಮಹಮ್ಮದ್, ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ವಸಂತ ಪೆಲ್ತಡ್ಕ , ಸಂಪಾಜೆ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಎ.ಕೆ.ಹನೀಫ್ , ಶ್ರೀಧರ್ ಕಡೆಪಾಲ ,ಫಿಲೋಮಿನಾ ಕ್ರಾಸ್ತ ,ಎಡ್ವೊಕೇಟ್ ಡೊಮಿನಿಕ್,ಹನೀಫ್ ಎಸ್.ಎ ಶಿವಲಿಂಗಂ,ಮೈಕಲ್ ಪಾಯಸ್ ಇವರುಗಳು ಉಪಸ್ತಿತರಿದ್ದರು.ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ ಸ್ವಾಗತಿಸಿ ಜಾನಿ.ಕೆ.ಪಿ ವಂದಿಸಿದರು.

