ಭಾರತ-ಪಾಕಿಸ್ತಾನ ಶತ್ರುತ್ವವನ್ನು ಅಂತ್ಯಗೊಳಿಸಬೇಕೆಂದು ಬಯಸುವುದು ಮತ್ತು ಹೇಳುವುದು ರಾಷ್ಟ್ರದ್ರೋಹವಲ್ಲ’- ಹಿಮಾಚಲಪ್ರದೇಶ ಹೈಕೋರ್ಟ್

ಪ್ರಜಾವಾರ್ತೆ:
ನವದೆಹಲಿ .ಜ.12
ಜೊತೆಗೆ : ಭಾರತ ಮತ್ತು ಪಾಕಿಸ್ತಾನದ ನಡುವಿನ ಶತ್ರುತ್ವವನ್ನು ಅಂತ್ಯಗೊಳಿಸಬೇಕೆಂದು ಹೇಳುವುದು ಮತ್ತು ಬಯಸುವುದು ರಾಷ್ಟ್ರದ್ರೋಹವಲ್ಲ, ಎಂದು ಹಿಮಾಚಲ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಪಾಕಿಸ್ತಾನ್ ಪತಾಕೆ ಮತ್ತು ನಿರೋಧಿತ ಶಸ್ತ್ರಾಸ್ತ್ರಗಳ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ವ್ಯಕ್ತಿಗೆ ಜಾಮೀನು ಮಂಜೂರು ಮಾಡುತ್ತಾ ಹಿಮಾಚಲ ಪ್ರದೇಶದ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಅಭಿಷೇಕ್ ಸಿಂಗ್ ಭರದ್ವಾಜ್ ಎಂಬವರ ಬಗ್ಗೆ ಹಿಮಾಚಲ ಪ್ರದೇಶ ಹೈಕೋರ್ಟ್ ಈ ವಿಷಯವನ್ನು ಉಲ್ಲೇಖಿಸುತ್ತಾ ಜಾಮೀನು ನೀಡಲಾಗಿದೆ. ಆಪರೇಷನ್ ಸಿಂಧೂರನ್ನು ಠೀಕಿಸಿದ ಆರೋಪ ಮತ್ತು ಪಾಕಿಸ್ತಾನದ ಮೂಲದವರೊಂದಿಗೆ ವಿಚಾರ ವಿನಿಮಯವನ್ನು ಮಾಡಿದ ಆರೋಪವನ್ನು ಅಭಿಷೇಕ ವಿರುದ್ಧ ಹೊರಿಸಲಾಗಿದೆ. ಆದರೆ ಎಫ್‌ಐಆರ್‌ ನಲ್ಲಿ ವಿದ್ವೇಷವನ್ನು ಹರಡುವ,ಮತ್ತು ಭಾರತಕ್ಕೆ ವಿರುದ್ಧವಾದ ಠೀಕೆ ಮಾಡಿದ್ದಾರೆ ಎಂದು ಉಲ್ಲೇಖ ಇಲ್ಲ ಎಂದು ಹಿಮಾಚಲ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

Leave a Reply

Your email address will not be published. Required fields are marked *