ತನ್ನ ಕಾರಿಗೆ ತಾನೇ ಸ್ವತಃ ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ
ಪ್ರಜಾವಾರ್ತೆ :ಜ 11
ದಾವಣಗೆರೆ : ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರೊಬ್ಬರು ತನ್ನದೇ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹ ಗುರುತು ಸಿಗದಂತೆ ಸುಟ್ಟು ಕರಕಲಾದ ಘಟನೆ ದಾವಣಗೆರೆಯ ನಾಗನೂರಿನ ಬಿಸ್ಲೇರಿ ಗ್ರಾಮದಲ್ಲಿ ನಡೆದಿರುವಿದಾಗಿ ವರದಿಯಾಗಿದೆ.
ಈ ಘಟನೆಗೂ ಮುನ್ನ ಚಂದ್ರಶೇಖರ್ ಸಂಕೋಲ್ ಅವರ ಮಗ ನರೇಶ್ (20) ಹಾಗೂ ಮಗಳು ಪವಿತ್ರಾ (23) ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇತ್ತ ಚಂದ್ರಶೇಖರ್ ಸಂಕೋಲ್ ಕಾರಿಗೆ ಬೆಂಕಿ ಹಚ್ಚಿಕೊಂಡು ಸುಟ್ಟು ಕರಕಲಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಿಜೆಪಿ ಪಕ್ಷದ ಮಾಜೀ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರಾಗಿದ್ದು. 56 ವರ್ಷ ವಯಸ್ಸಿನ ಚಂದ್ರಶೇಖರ ಸಂಖೋಳ್ ಎಂದು ತಿಳಿದು ಬಂದಿದೆ.
ಬಿಸ್ಲೇರಿ ಗ್ರಾಮದಲ್ಲಿನ ತನ್ನ ಜಮೀನಿಗೆ ಕಾರಿನಲ್ಲಿ ಹೋಗಿ ಅಲ್ಲಿ ಸ್ವತಃ ತನ್ನ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಶರೀರ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರ ಮಾಡುತ್ತಿದ್ದ ಶಾಮನೂರು ಗ್ರಾಮದ ಸಂಕೋಳ್ ಚಂದ್ರಶೇಖರ್ ಮೃತ ದುರ್ದೈವಿ ಎಂದು ಮಾಹಿತಿ ದೊರಕಿದೆ. ಇವರು ಈ ಹಿಂದೆ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರು ಆಗಿದ್ದರು. 2007 ರಲ್ಲಿ ಮಹಾನಗರ ಪಾಲಿಗೆಗೆ ಸ್ಪರ್ಧಿಸಿ ಜಯಗಳಿಸಿದ್ದರೆಂದು ತಿಳಿದು ಬಂದಿದೆ. ಆತ್ಮಹತ್ಯೆಯ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

