ಸುಳ್ಯ ದುಸ್ತಿತಿಯಲ್ಲಿದ್ದ ರಸ್ತೆ ಕಾಂಕ್ರೀಟೀಕರಣಗೊಂಡು ಲೋಕಾರ್ಪಣೆ . ಕೆ.ಎಸ್ ಉಮ್ಮರ್ ಅವರಿಗೆ ಸನ್ಮಾನ

ಪ್ರಜಾವಾರ್ತೆ.
ಜ.9: ಸುಳ್ಯದ ನಗರದ ಹೃದಯಭಾಗದಲ್ಲಿ ನವ ಖಾಸಗಿ ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣಗಳ ಮಧ್ಯೆಯ ರಸ್ತೆಯ ಭಾಗವಾದ ಸ್ಥಳವು ದೀರ್ಘಕಾಲದಿಂದ ದುರ್ಸ್ಥಿತಿಯಲ್ಲಿತ್ತು. ಇದನ್ನು ಮನಗಂಡ ನಗರ ಪಂಚಾಯತ್ ಮಾಜೀ ಸದಸ್ಯ ಕೆ.ಸ್ ಉಮ್ಮರ್ ಸುಳ್ಯ ನಗರ ಪಂಚಾಯತಿಗೆ ಒತ್ತಡವನ್ನು ತಂದು ರೂ. 5 ಲಕ್ಷ ವೆಚ್ಚದಲ್ಲಿ ದುಸ್ಥಿತಿಯಲ್ಲಿದ್ದ ರಸ್ತೆಯ ಭಾಗವನ್ನು ಕಾಂಕ್ರಿಟೀಕರಣ ಮಾಡಲಾಗಿ, ಇಂದು ಆ ರಸ್ತೆಯನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಾಂಕ್ರೀಟೀಕರಣವನ್ನು ಉದ್ಘಾಟಿಸಿ ಮಾತನಾಡಿದ ನಗರ ಪಂಚಾಯತ್ ಮಾಜೀ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ನಗರದ ಪ್ರಮುಖ ಪ್ರದೇಶವನ್ನು ಸುಸಜ್ಜಿತಗೊಳಿಸುವ ಮೂಲಕ ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಸ್. ಉಮ್ಮರ್ ಅವರ ಬಗ್ಗೆ ಅವರೊಬ್ಬ ಸಾಮಾಜಿಕ ಕಳಕಳಿಯುಳ್ಳ ನಾಯಕ ಎಂದು ಶ್ಲಾಘಿಸಿದರು.

ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಮಾತನಾಡಿ, ಸುಳ್ಯ ನಗರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ರಶೀದ್ ಜಟ್ಟಿಪ್ಪಳ್ಳ, ಸ್ಥಳೀಯ ಉದ್ಯಮಿಗಳಾದ ರಜಾಕ್ ಹಾಜಿ, ನಾಗೇಶ್ ಹಮೀದ್ , ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸುಂದರ್, ಗುರೂಜಿ ಬಸ್ ಮಾಲಕ ಮೋಹನ್, ಟೂರ್ ಆಪರೇಟರ್ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭ ಸ್ಥಳೀಯ ನಗರ ಪಂಚಾಯತ್ ಸದಸ್ಯರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೆ.ಎಸ್. ಉಮ್ಮರ್ ಅವರನ್ನು ಸ್ಥಳೀಯ ನಾಗರಿಕರು, ಉದ್ಯಮಿಗಳು ಹಾಗೂ ಆಟೋ ಮಾಲಕರ–ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

Leave a Reply

Your email address will not be published. Required fields are marked *