ಮಡಿಕೇರಿ ಬಳಿಯ ದೇವರ ಕೊಲ್ಲಿ ಎಂಬಲ್ಲಿ ಗೂಡ್ಸ್ ಲಾರಿ ಬೆಂಕಿಗೆ ಆಹುತಿ.
ಪ್ರಜಾವಾರ್ತೆ. ಜ.9 ಮಡಿಕೇರಿ ಬಳಿಯ ದೇವರ ಕೊಲ್ಲಿ ಎಂಬಲ್ಲಿ ಗೂಡ್ಸ್ ಲಾರಿಯೊಂದು ಇಂದು ಬೆಳಿಗ್ಗೆ ಬೆಂಕಿಗೆ ಆಹುತಿಯಾದ ಘಟನೆ ವರದಿಯಾಗಿದೆ .
ಅಗ್ನಿ ಶಾಮಕ ದಳದವರು ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿ ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆದಿರುವುದಾಗಿ ತಿಳಿದು ಬಂದಿದೆ .ಘಟನೆಯ ಬಗೆಗಿನ ವಿವರವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.


