ಎಲ್ಲರೂ ಸಂವಿಧಾನವನ್ನು ಪಾಲನೆ ಮಾಡಿದಲ್ಲಿ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾದ್ಯ ‘-ಕಾಂತಪುರಂ ಎ.ಪಿ

ಪ್ರಜಾವಾರ್ತೆ:
ಜ.16 ಕೋಟಯಂ;
ಭಾರತದ ಸಂವಿಧಾನದ ಪ್ರಕಾರ ಎಲ್ಲರೂ ಬದುಕಿದರೆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ಬದುಕು ಸಾದ್ಯವಾಗಲಿದೆ ಎಂದು ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್. ತಿಳಿಸಿದರು.

ಜನರ ನಡುವೆ ಒಡಕುಂಟುಮಾಡಲು ಪ್ರಯತ್ನಿಸುತ್ತಿರುವ ವಿಛ್ಚಧ್ರಕಾರೀ ಶಕ್ತಿಗಳ ವಿರುದ್ಧ ಎಚ್ಚರಿಕೆಯನ್ನು ವಹಿಸಬೇಕೆಂದು ಅವರು ಹೇಳಿದರು.

‘ಮನುಷ್ಯರೊಂದಿಗೆ’ ಎಂಬ ಶೀರ್ಷಿಕೆಯಡಿ ಮುಸ್ಲಿಂ ಜಮಾಅತ್ ಆಯೋಜಿಸಿದ್ದ ಕೇರಳ ಯಾತ್ರೆಗೆ ಕೋಟಯಂನ ತಿರುನ್ನಕ್ಕರದಲ್ಲಿ ಕೋರಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಯಾವುದೇ ಸಮಾಜವಾಗಲಿ ಧರ್ಮಗಳಾಗಲಿ ಪರಸ್ಪರ ಹಿಂಸಿಸಬಾರದು ಎನ್ನುವ ನಿಲುವನ್ನು ನಾವು ಪಾಲಿಸಿಕೊಂಡು ಬರುತ್ತಿದ್ದೆವು.

ಆದರೆ, ಈಗ ಅದು ಮಾಯವಾಗುತ್ತಿದೆ. ಕೆಲವು ದುಷ್ಟ ಶಕ್ತಿಗಳು ಎಲ್ಲಾ ರೀತಿಯಲ್ಲೂ ಮನುಷ್ಯರ ಮಧ್ಯೆ ಪರಸ್ಪರ ವಿಭಜನೆ ಮತ್ತು ವಿದ್ವೇಷವನ್ನು ಹರಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

ಇದರ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು. ಸಂಕಷ್ಟ ಅನುಭವಿಸುತ್ತಿರುವ ಮಾನವನ ನೋವುಗಳಿಗೆ ಪರಿಹಾರ ಕಾಣುವ ಸಂದರ್ಭದಲ್ಲಿ ವಿಭಜನಾತ್ಮಕ ಚಿಂತನೆಗಳು ನಮ್ಮನ್ನು ಪ್ರಭಾವಿಸಬಾರದು ಎಂದು ಅವರು ಹೇಳಿದರು.

“ಮಾನವರೊಂದಿಗೆ” ಎಂಬ ಶಿರೋನಾಮೆಯಡಿ ನಡೆಯುತ್ತಿರುವ ಕೆರಳ ಯಾತ್ರೆ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೇರಳದ ಮಂತ್ರಿ ವಿ.ಎನ್.ವಾಸನ್ ಅವರು ,ದೇಶದಲ್ಲಿ ಇಂದು ಸಂವಿಧಾನ ನಮಗೆ ದಯಪಾಲಿಸಿರುವ ಜಾತ್ಯಾತೀತತ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿ ಸಿಲುಕಿದೆ. ಇದರ ವಿರುದ್ದವಾದ ಶಕ್ತಿಗಳು ಹೆಡೆಬಿಚ್ಚಿನಿಂತು ಮಾನವೀಯ ಮೌಲ್ಯಗಳನ್ನು ಕುಟುಕಲು ನೋಡುತ್ತಿರುವಾಗ ಪ್ರಜಾಪ್ರಭುತ್ವದ ಮತ್ತು ಸಂವಿದಾನದ ಮೌಲ್ಯಗಳನ್ನು ಕಾಪಾಡುವ ಪ್ರಯತ್ನವನ್ನು ನಾವು ಮಾಡಬೇಕಿದೆ.

ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯದ್ ಅಲಿ ಬಾಫಖಿ ತಮ್ಮ ಪ್ರಾರ್ಥನೆಯೊಂದಿಗೆ ಸಮ್ಮೇಳನವನ್ನು ಪ್ರಾರಂಭಿಸಿದರು. ಜಿಲ್ಲಾ ಅಧ್ಯಕ್ಷ ಕೆ.ಎಸ್.ಎಂ ರಫೀಖ್ ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕೋಟಯಮ್ ಮುನಿಸಿಪ್ಪಲ್ ಎಂ.ಪಿ ಸಂತೋಷ್ ಕುಮಾರ್, ಯಾತ್ರೆ ಉಪನಾಯಕರಾದ ಸಯ್ಯಿದ್ ಇಬ್ರಾಹಿಮುಲ್ ಖಲೀಲ್ ಅಲ್ ಬುಖಾರಿ, ಪೇರೋಟ್ ಅಬ್ದುಲ್ ರಹ್ಮಾನ್ ಸಖಾಫಿ, ಫ್ರಾನ್ಸಿಸ್ ಜಾರ್ಜ್ ಎಂ.ಪಿ, ಅಡ್ವಾ, ಸೆಬಾಸ್‌ಟ್ಯನ್ ಕುಲತ್ತುಂಕಲ್ ಎಂ.ಎಲ್.ಎ, ಜಯಸೂರ್ಯನ್ ಭಟ್ಟದಿರಿಪಾಡ್, ಅಸೀಸ್ ಬಡಾಯ್ಲ್, ಇಸ್ಸುದ್ದೀನ್ ಸಖಾಫಿ ಮುಂತಾದವರು ಮಾತನಾಡಿದರು. ಡಾ. ಮಹಮ್ಮದ್ ಫಾರೂಖ್ ನಈಮಿ ವಿಷಯ ಮಂಡನೆ ಮಾಡಿದರು. ಸಯ್ಯಿದ್ ಶರಫುದ್ದೀನ್ ಜಮಲುಲ್ಲೈಲಿ, ಸಯ್ಯಿದ್ ಮುಹಮ್ಮದ್ ಹುಸೇನ್ ಮಾರಿಮಂಗಲಂ, ಅಬ್ದುಲ್ರಹ್ಮಾನ್ ಫೈಸಿ, ವಂಟೂರು ಅಬ್ದುಲ್ ರಹ್ಮಾನ್ ಫೈಸಿ, ಬಿ.ಎಸ್.ಅಬ್ದುಲ್ಲಕುಂಞಿ ಫೈಸಿ, ಅಬು ಹನೀಫಲ್ ಫೈಸಿ ತೆನ್ನಲ, ಎನ್. ಅಲಿಅಬ್ದುಲ್ಲ, ಮಜೀದ್ ಕಕ್ಕಾಡ್, ಮುಸ್ತಫ ಕೋಡೂರು, ಮಹಮ್ಮದ್ ಪರವೂರು ಭಾಗವಹಿಸಿದ್ದರು. ಎ. ಎಂ. ಶಾಜಿ ಸ್ವಾಗತ ಮತ್ತು ಅಬ್ದು ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *